ಬೆಂಗಳೂರು:- ನೀವು ಪಿಂಕ್ ವಾಟ್ಸ್ಆ್ಯಪ್ ಬಳಸ್ತಾ ಇದ್ದೀರಾ!? ಹಾಗಿದ್ರೆ ಈ ಸ್ಟೋರಿ ಮಿಸ್ ಮಾಡ್ದೆ ನೋಡಿ. ಅನಧಿಕೃತ ಆ್ಯಪ್ ಬಳಸಬೇಡಿ, ಆಫರ್ ಡಿಸ್ಕೌಂಟ್ ಅಮಿಷಕ್ಕೆ ಬಲಿಯಾಗಬೇಡಿ ಎಂದು ಜನರಿಗೆ ಎಷ್ಟೇ ತಿಳಿಹೇಳಿದರೂ, ಮತ್ತೆ ಮತ್ತೆ ಜನರು ಉಚಿತದ ಆಸೆಗೆ ಬಲಿಬೀಳುತ್ತಿದ್ದಾರೆ. ಜನರ ದುರಾಸೆಯನ್ನು ಸೈಬರ್ ವಂಚಕರು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಇದೇ ರೀತಿಯ ಹಳೆಯ ವಂಚನೆ ಒಂದು ಮತ್ತೆ ಪ್ರಚಾರಕ್ಕೆ ಬಂದಿದ್ದು, ಕರ್ನಾಟಕ ಪೊಲೀಸರು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಜನರಿಗೆ ಸೂಚಿಸಿದ್ದಾರೆ.
ಇನ್ನೂ ಸೈಬರ್ ವಂಚನೆ ಮತ್ತು ಹಗರಣ ಕುರಿತು ಜನರಿಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅದೆಷ್ಟೇ ಎಚ್ಚರಿಕೆ ನೀಡಿದರೂ, ಮತ್ತೆ ಮತ್ತೆ ಮೋಸ ಹೋಗುವುದು ಹಾಗು ಹೊಸ ಹೊಸ ಸ್ವರೂಪದ ಸೈಬರ್ ಕ್ರೈಮ್ಗೆ ಸಿಲುಕುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಜನರ ಸಹಕಾರವಿಲ್ಲದೆ ಪೊಲೀಸರು ಕೂಡ ವಂಚನೆ ತಡೆಯಲು ವಿಫಲರಾಗುತ್ತಾರೆ. ಹೀಗಾಗಿ ಎಚ್ಚರ ವಹಿಸಿ ಎಂದು ಮನವರಿಕೆ ಮಾಡಿದ್ದಾರೆ.