ಕ್ಯಾನ್ಸರ್ನಲ್ಲಿ ಹಲವಾರು ವಿಧಗಳಿವೆ. ಅದರಲ್ಲೂ ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆಯಾಗಿದೆ. ಸ್ತನ ಕ್ಯಾನ್ಸರ್ಗೆ ಕಾರಣದ ಮೂಲ ಹುಡುಕುತ್ತಿದ್ದ ಸಂಶೋಧಕರು ನಮ್ಮ ನಿತ್ಯ ಬಳಕೆಯ ವಸ್ತುಗಳಿಂದಲೂ ಸ್ತನ ಕ್ಯಾನ್ಸರ್ ಬರುತ್ತದೆ ಎಂಬ ಆಘಾತಕಾರಿ ಅಂಶವನ್ನು ಬಗಹಿರಂಗ ಪಡಿಸಿದ್ದಾರೆ. ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದ ಸುಮಾರು ಸಾವಿರ ರಾಸಾಯನಿಕಗಳಿಗೆ ಮಹಿಳೆಯರು ಪ್ರತಿದಿನವೂ ಒಡ್ಡಿಕೊಳ್ಳುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ವಿಷಶಾಸ್ತ್ರಜ್ಞ ಮತ್ತು ಪ್ರಮುಖ ಸಂಶೋಧಕ ಡಾ ಜೆನ್ನಿ ಕೇ ಅವರು ಹೇಳುವಂತೆ, ಮಹಿಳೆಯರು ನಿತ್ಯ ಬಳಸುವ ಮೇಕಪ್ಗಳು ಹತ್ತಾರು ರಾಸಾಯನಿಕಗಳ ಹೊಂದಿರುತ್ತದೆ. ಇದು ಕ್ಯಾನ್ಸರ್ಯುಕ್ತ ಕಣಗಳ ಹುಟ್ಟಿಗೆ ಕಾರಣವಾಗುತ್ತಿದೆ. ಹೀಗಾಗಿ ಅವರು ಅಗ್ಗದ ಮೇಕ್ ಅಪ್ ಬಿಡಬೇಕು ಇಲ್ಲವೇ ಮೇಕ್ಅಪ್ ಇಲ್ಲದೆ ಬದುಕುವುದನ್ನು ಅಭ್ಯಾಸ ಮಾಡಬೇಕು ಎಂದಿದ್ದಾರೆ. ಇದರ ಜೊತೆಗೆ ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಅದರಲ್ಲಿನ ರಾಸಾಯನಿಕಗಳು ಹೊರಹೋಗಿವೆ ಎಂದು ದೃಢಪಡಿಸಿಕೊಂಡ ಬಳಿಕವಷ್ಟೇ ಸೇವನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಸ್ತನ ಕ್ಯಾನ್ಸರ್ ಅಪಾಯದಲ್ಲಿರುವ ಲಕ್ಷಾಂತರ ಮಹಿಳೆಯರಿಗೆ ಇಂಗ್ಲೆಂಡ್ನಲ್ಲಿ ರೋಗವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಔಷಧವನ್ನು ನೀಡಲಾಗುತ್ತದೆ. ಈ ಔಷಧಗಳು ಅವರಿಗೆ ಕ್ಯಾನ್ಸರ್ ಬರುವುದನ್ನು ತಡೆಯಬಹುದು ಆದರೆ ದೀರ್ಘಕಾಲದಲ್ಲಿ ಇದು ಸಾಧ್ಯವಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಂಡುಬಂದಿದೆ. ಈ ಕ್ಯಾನ್ಸರ್ ಮಹಿಳೆಯರ ಸಾವಿನ 2ನೇ ಕಾರಣವಾಗಿದೆ.
ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದ್ದಂತೆ ಸಂಶೋಧಕರು ಬರೋಬ್ಬರಿ 922 ರಾಸಾಯನಿಕಗಳ ಪಟ್ಟಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸುಮಾರು 278 ರಾಸಾಯನಿಕಗಳು ಪ್ರಾಣಿಗಳಲ್ಲಿನ ಸಸ್ತನಿ ಗೆಡ್ಡೆಗಳಿಗೆ ಸಂಬಂಧಿಸಿವೆ. ಮತ್ತು ಇನ್ನೂ 420 ಡಿಎನ್ಎ ಹಾನಿ ಮತ್ತು ಹಾರ್ಮೋನ್ಗಳನ್ನು ಬದಲಾಯಿಸುವುದು ಕಂಡುಬಂದಿದೆ, ಅದರಲೀ ಈಸ್ಟ್ರೇಜನ್ ಹೆಚ್ಚಿಸಲು ತೆಗೆದುಕೊಳ್ಳುವ ಔಷಧವೇ ಹೆಚ್ಚು ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.