ಬೆಂಗಳೂರು:– ಜೆ.ಬಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿ ತೃತೀಯ ಲಿಂಗಿ ಹತ್ಯೆ ಕೇಸ್ ಗೆ ಸಂಬಧಪಟ್ಟಂತೆ ಓರ್ವ ಮಹಿಳೆಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರಿ ರಜೆ: ಮೂರು ದಿನ ಆಪ್ತರು, ಕುಟುಂಬಸ್ಥರಿಗಿಲ್ಲ ರೇವಣ್ಣ ಭೇಟಿಗೆ ಅವಕಾಶ!
51 ವರ್ಷದ ಪ್ರೇಮ ಆರೋಪಿ ಮಹಿಳೆ ಎನ್ನಲಾಗಿದೆ. ಇದೇ ಮೇ. 3ರಂದು ಜೆ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಂಜಿ ಬಾಯ್ ಅಲಿಯಾಸ್ ಮಂಜ ನಾಯ್ಕ್ ಎಂಬ ತೃತೀಯ ಲಿಂಗಿ ಕೊಲೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವದ ಕುರಿತು ಪೊಲೀಸರು ಮೊದಲಿಗೆ UDR ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ನಂತರ ಮರಣೋತ್ತರ ಪರೀಕ್ಷೆ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿದೆ. ಈ ಹಿನ್ನೆಲೆ ತೃತೀಯ ಲಿಂಗಿ ಜೊತೆ ವಾಸವಿದ್ದ ಮಹಿಳೆ ಪ್ರೇಮ ಎಂಬುವವರನ್ನು ಬಂಧಿಸಿದ್ದ ಪೊಲೀಸರು, ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಮಹಿಳೆ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾರೆ. ‘ಪತಿ ಮೃತರಾದ ಮೇಲೆ 20 ವರ್ಷದಿಂದ ತೃತೀಯ ಲಿಂಗಿಯ ಜೊತೆ ವಾಸವಿದ್ದ ಮಹಿಳೆ ಪ್ರೇಮಾ, ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಇತ್ತ ಮೃತ ಮಂಜಿ ಬಾಯ್, ಕಂಪನಿಯೊಂದರ ಕ್ಯಾಂಟಿನ್ನಲ್ಲಿ ಕೆಲಸ ಮಾಡುತ್ತಿದ್ದರು
ಇನ್ನು ಹೀಗಿದ್ದವರ ನಡುವೆ ಕಳೆದ ಏಪ್ರಿಲ್.26 ರಂದು ಮನೆಯಲ್ಲಿ ಇಬ್ಬರ ನಡುವೆ ಜಗಳ ಆಗಿತ್ತು. ಈ ವೇಳೆ ಮಹಿಳೆಗೆ ಚಾಕುವಿನಿಂದ ಚುಚ್ಚಲು ತೃತೀಯ ಲಿಂಗಿ ಮುಂದಾಗಿದ್ದರು. ಇದರಿಂದ ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರೇಮ, ಟವಲ್ ತೆಗೆದುಕೊಂಡು ಮಂಜಿಬಾಯ್ ಕುತ್ತಿಗೆಯನ್ನು ಬೀಗಿಯಾಗಿ ಬಿಗಿದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿ