ಬೆಂಗಳೂರು: ಸಿಎಂ ಇದ್ದ ವೇದಿಕೆಯಲ್ಲಿ ಸಚಿವರ ಮೇಲೆ ನಡೆದ ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ನಡೆದ ಗಲಾಟೆ ಖಂಡಿಸಿ ರಾಜ್ಯದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ರಾಜ್ಯ ಅಲ್ಲ, ದೇಶ ಹೋರಾಟ ಮಾಡಲಿ ನಮಗೆ ಅಭ್ಯಂತರ ಏನಿಲ್ಲ.
ವೇದಿಕೆಯಲ್ಲಿ ಮಂತ್ರಿಗಳು ತಮ್ಮ ನುಡಿಮುತ್ತುಗಳನ್ನಾಡಿದ್ದಾರೆ. ಅಲ್ಲೇ ಅವರ ಸಂಸ್ಕೃತಿ ಅನಾವರಣ ಆಗಿದೆ. ನಮ್ಮ ಸಂಸ್ಕೃತಿ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದ್ದರು. ಇನ್ನೂ ಸಿಎಂ, ಬಿಜೆಪಿ ಅಧ್ಯಕ್ಷ, ಅಶೋಕ್ ಎಲ್ಲಾ ಅವರವರ ಪರ ಮಾತುಗಳನ್ನು ಆಡಿದ್ದಾರೆ. ಇದರಲ್ಲೇ ಅವರ ವಿಶ್ವರೂಪ ಪ್ರದರ್ಶನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
