ಇಸ್ಲಾಮಾಬಾದ್: ಪಂಜಾಬ್ ಪ್ರಾಂತ್ಯದ ಪಾಕಿಸ್ತಾನದ ವಾಯುಪಡೆ ತರಬೇತಿ (Pakistan Air Force Base) ನೆಲೆಯ ಮೇಲೆ ದಾಳಿ ನಡೆಸಿದ್ದ 9 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಶನಿವಾರ ಮುಂಜಾನೆ ಒಂಬತ್ತು ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದರು. ಅವರೆಲ್ಲರನ್ನೂ ನರಕಕ್ಕೆ ಕಳುಹಿಸಲಾಗಿದೆ ಎಂದು ಪಾಕ್ ಸೇನೆ ಹೇಳಿದೆ. ದೇಶದಲ್ಲಿ ಮೂರು ಪ್ರತ್ಯೇಕ ಭಯೋತ್ಪಾದಕ ದಾಳಿಗಳಲ್ಲಿ 17 ಸೈನಿಕರು ಸಾವಿಗೀಡಾಗಿದ್ದಾರೆ.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ಪಾಕಿಸ್ತಾನದ ವಾಯುಪಡೆಯ ಮಿಯಾನ್ವಾಲಿ ತರಬೇತಿ ವಾಯುನೆಲೆಯ ಮೇಲೆ ಒಂಬತ್ತು ಭಯೋತ್ಪಾದಕರು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ ಕಾರ್ಯನಿರ್ವಹಿಸದ ಮೂರು ವಿಮಾನಗಳಿಗೆ ಹಾನಿಯಾಗಿತ್ತು. ಪಿಎಎಫ್ ತರಬೇತಿ ಏರ್ಬೇಸ್ ಮಿಯಾನ್ವಾಲಿಯಲ್ಲಿ ಕೂಂಬಿಂಗ್ ಮತ್ತು ಕ್ಲಿಯರೆನ್ಸ್ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ. ಎಲ್ಲಾ ಒಂಬತ್ತು ಭಯೋತ್ಪಾದಕರನ್ನು ನರಕಕ್ಕೆ ಕಳುಹಿಸಲಾಗಿದೆ ಎಂದು ಮಿಲಿಟರಿ ದೃಢಪಡಿಸಿದೆ.