ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫೆಬ್ರವರಿ 1ರಿಂದ ಆರಂಭ ಆಗುತ್ತಿದೆ. ಈ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್ನ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ, ಮಂಜು ಪಾವಗಡ, ಸೂರಜ್, ಜಗದೀಶ್ ಮೊದಲಾದವರು ಬಾಯ್ಸ್ ತಂಡದಲ್ಲಿ ಇದ್ದರೆ, ಶುಭಾ ಪೂಂಜಾ, ಐಶ್ವರ್ಯಾ, ಶೋಭಾ ಶೆಟ್ಟಿ, ರಮ್ಯಾ, ಸ್ಪಂದನಾ ಮೊದಲಾದವರು ಗರ್ಲ್ಸ್ ಗ್ಯಾಂಗ್ನಲ್ಲಿ ಇದ್ದಾರೆ. ಬಾಯ್ಸ್ ತಂಡಕ್ಕೆ ವಿನಯ್ ಲೀಡರ್ ಆದರೆ, ಗರ್ಲ್ಸ್ ತಂಡಕ್ಕೆ ಶುಭಾ ಪೂಂಜಾ ಲೀಡರ್ ತಂಡಕ್ಕೆ ನಾಯಕಿ ಆಗಿದ್ದಾರೆ.
ಆಂಗ್ಲರ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್ಸ್! ರನ್ ಗಳಿಸಲು ಪರದಾಡಿದ ಇಂಗ್ಲೆಂಡ್!
ಕಲರ್ಸ್ ಕನ್ನಡದಲ್ಲಿ ಶೀಘ್ರವೇ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಈ ರಿಯಾಲಿಟಿ ಶೋಗೆ ಬಿಗ್ ಬಾಸ್ ಮನೆಯ ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಮೊದಲು ರಜತ್ ಅವರಿಗೆ ಶೋಭಾ ಶೆಟ್ಟಿ ಅವರು ಹಾರ ಹಾಕಿದರು. ಈ ಮೂಲಕ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಅವರನ್ನು ಆಯ್ಕೆ ಮಾಡಿದರು. ರಜತ್ ಅವರಿಗೆ ರಿಯಾಲಿಟಿ ಶೋ ಆಡಿದ ಅನುಭವ ಇದೆ. ಹೊಸ ಶೋಗೆ ಆಯ್ಕೆ ಆದ ವಿಚಾರ ಅವರಿಗೆ ಖುಷಿ ಕೊಟ್ಟಿದೆ.
ಭವ್ಯಾ ಗೌಡ ಅವರು ಕೂಡ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಆಯ್ಕೆ ಆಗಿದ್ದಾರೆ. ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಇದ್ದಾರೆ. ಅವರಿಗೆ ಈ ಆಫರ್ ಸಿಕ್ಕಿದ್ದಕ್ಕೆ ಭರ್ಜರಿ ಖುಷಿ ಇದೆ. ಅವರು ಸಂತಸ ಹೊರಹಾಕಿದ್ದಾರೆ.
ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟಾಸ್ಕ್ ಆಡಿದ್ದಾರೆ. ಮೂರು ಬಾರಿ ಕ್ಯಾಪ್ಟನ್ ಕೂಡ ಆದರು. ಈ ಮೂಲಕ ಸ್ಟ್ರ್ರಾಂಗ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಅವರು ಉತ್ತಮವಾಗಿ ಆಡಬಹುದು.
ಹನುಮಂತ ಅವರು ದೊಡ್ಮನೆಯಲ್ಲಿ ಗಮನ ಸೆಳೆದರು. ಜೀ ಕನ್ನಡದಲ್ಲಿ ರಿಯಾಲಿಟಿ ಶೋ ಮಾಡಿದ್ದ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಈಗ ಮತ್ತೊಂದು ಆಫರ್ ಸಿಕ್ಕಿದೆ.
ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಹನುಮಂತ ಅವರು ಬರಲಿದ್ದಾರೆ. ಧನರಾಜ್ ಅವರು ಹನುಮಂತನಿಗೆ ಮಾಲೆ ಹಾಕಿ ಹೊಸ ರಿಯಾಲಿಟಿ ಶೋಗೆ ಸ್ವಾಗತಿಸಿದರು ಅನ್ನೋದು ವಿಶೇಷ