ಆಚಾರ್ಯ ಚಾಣಕ್ಯರನ್ನು ವಿದ್ವಾಂಸರು ಮತ್ತು ಶ್ರೇಷ್ಠ ಶಿಕ್ಷಕರಲ್ಲಿ ಪ್ರಮುಖರೆಂದು ಪರಿಗಣಿಸಲಾಗಿದೆ. ವ್ಯಾಪಾರ, ವೈವಾಹಿಕ ಜೀವನ, ಸಮಾಜ, ಜೀವನ, ಹಣ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಪ್ರೇರೇಪಿಸುವ ವಿಷಯಗಳನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಚಾಣಕ್ಯ ನೀತಿಯಲ್ಲಿ, ಅವರು ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳಿದ್ದಾರೆ. ಅದೇ ರೀತಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಚಾಣಕ್ಯ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ.
ಮಹಿಳೆಯರ ಕೆಲವು ಅಭ್ಯಾಸಗಳು ತಮ್ಮ ಗಂಡನ ಜೀವನವನ್ನು ತೊಂದರೆಗೆ ಸಿಲುಕಿಸುತ್ತವೆ. ಕಷ್ಟಗಳು/ ಪ್ರತಿಕೂಲ ಪರಿಸ್ಥಿತಿಗಳು ಎಂಬುದು ಜೀವನದ ಒಂದು ಭಾಗವಾಗಿದೆ. ಇದು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಅನ್ವಯಿಸುತ್ತದೆ. ಕೆಲವು ಅಭ್ಯಾಸಗಳು ಯಾರನ್ನಾದರೂ ಸರುಯೇ ಕಾಡುತ್ತವೆ. ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಇದು ದಂಪತಿ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ/ ಪ್ರತಿಕೂಲ ಪರಿಸ್ಥಿತಿಯನ್ನು ಉಂಟುಮಾಡಬಹುದು. ಮಹಿಳೆಯರು ತಮ್ಮ ದುಃಖದಲ್ಲಿರುವ ಗಂಡನನ್ನು ಬೆಂಬಲಿಸದಿದ್ದರೆ.. ದಂಪತಿಯ ಜೀವನವು ಕಷ್ಟಗಳಿಂದ ಸುತ್ತುವರೆದಿರುತ್ತದೆ.
ರೋಗಗಳನ್ನು ನಿರ್ಲಕ್ಷಿಸುವುದು:
ಆಚಾರ್ಯ ಚಾಣಕ್ಯನ ಪ್ರಕಾರ, ಮಹಿಳೆಯರು ಸಾಮಾನ್ಯವಾಗಿ ತಮ್ಮ ರೋಗಗಳನ್ನು ಮರೆಮಾಚುವ ಅಭ್ಯಾಸವನ್ನು ಹೊಂದಿರುತ್ತಾರೆ. ಯಾವುದೇ ಓರ್ವ ಮಹಿಳೆ ಅಸ್ವಸ್ಥಳಾಗಿದ್ದರೂ, ಅವಳು ತನ್ನ ಗಂಡ ಅಥವಾ ಕುಟುಂಬದ ಮುಂದೆ ಇದನ್ನು ಹೇಳಲು ಮುಂದಾಗುವುದಿಲ್ಲ. ಅವಳು ಸ್ವತಃ ಒತ್ತಡವನ್ನು ಎದುರಿಸುತ್ತಲೇ ಇರುತ್ತಾಳೆ, ಅದು ಅವಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದವರೆಗೆ ಸರಿಯಾದ ಚಿಕಿತ್ಸೆಯ ಕೊರತೆಯಿಂದಾಗಿ, ರೋಗಗಳು ಮಹಿಳೆಯರನ್ನು ಹಿಡಿದಿಟ್ಟುಕೊಳ್ಳುತ್ತವೆ, ಇದರಿಂದಾಗಿ ಅವಳು ಸ್ವತಃ ತೊಂದರೆಗೊಳಗಾಗುತ್ತಾಳೆ. ಹಾಗೂ ಇಡೀ ಕುಟುಂಬವೂ ಇದರಿಂದ ತೊಂದರೆಯನ್ನು ಅನುಭವಿಸುತ್ತದೆ.
ಬಲವಂತದ ಒಪ್ಪಿಗೆ:
ಸಂತೋಷದ ದಾಂಪತ್ಯ ಜೀವನಕ್ಕಾಗಿ, ಪತಿ ಮತ್ತು ಪತ್ನಿ ಪ್ರತಿಯೊಂದು ನಿರ್ಧಾರದಲ್ಲೂ ಒಂದೇ ಅಭಿಪ್ರಾಯವನ್ನು ಹೊಂದಿರುವುದು ಅವಶ್ಯಕ. ಕೆಲವು ಸಂದರ್ಭಗಳಲ್ಲಿ ಕೆಲವು ಕಾರಣಗಳಿಂದ ಅಥವಾ ಅನುಪಸ್ಥಿತಿಯಿಂದ ಮಹಿಳೆಯರು ಕುಟುಂಬದವರು ಅಥವಾ ಗಂಡನ ಮುಂದೆ ತಮ್ಮ ಒಪ್ಪಿಗೆಯನ್ನು ಪ್ರಸ್ತುತಪಡಿಸುವುದಿಲ್ಲ ಎಂದು ಚಾಣಕ್ಯ ಹೇಳುತ್ತಾನೆ. ಯಾವುದೇ ವಿವಾದ ಇರಬಾರದು ಎನ್ನುವ ಕಾರಣದಿಂದ ಅವಳು ಇಷ್ಟಪಡದ ನಿರ್ಧಾರವನ್ನು ಕೂಡ ಒಪ್ಪಿಕೊಳ್ಳುತ್ತಾಳೆ. ನಂತರ ಅದರ ಪರಿಣಾಮಕ್ಕೆ ಆಕೆಯೋರ್ವಳೇ ವಿಷಾಧಿಸುತ್ತಾಳೆ. ಅದು ಪುರುಷನಾಗಿರಲಿ ಅಥವಾ ಹೆಣ್ಣಾಗಿರಲಿ, ನೀವು ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ಮಾತುಗಳನ್ನು ಉಳಿಸಿಕೊಳ್ಳಬೇಕು, ಏಕೆಂದರೆ ನಿಮ್ಮ ಮಾತುಗಳು ತಪ್ಪು ನಿರ್ಧಾರದಿಂದ ನಿಮ್ಮನ್ನು ರಕ್ಷಿಸುವ ಸಾಧ್ಯತೆಯಿದೆ.
ಸುಳ್ಳು:
ಶಾಶ್ವತ ಧೈರ್ಯ, ಭ್ರಮೆ, ಮೂರ್ಖತನ, ಸುಳ್ಳು ಹೇಳುವ ಅಭ್ಯಾಸವಿರುವ ಮಹಿಳೆಯರು ತಮ್ಮ ಸುಳ್ಳಿನಲ್ಲೇ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಚಾಣಕ್ಯ ತನ್ನ ನೀತಿಯ ಮೂಲಕ ಹೇಳಿದ್ದಾನೆ. ಅಂದಹಾಗೆ, ಸುಳ್ಳು ಹೇಳುವ ಅಭ್ಯಾಸವು ಯಾರಿಗಾದರೂ ಇರಬಹುದು, ಆದರೆ ಅದು ಮನೆಯ ಮುಖ್ಯಸ್ಥನ ಮೇಲೆ ಪ್ರಾಬಲ್ಯ ಹೊಂದಿದ್ದರೆ, ನಂತರ ಕುಟುಂಬವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸುಳ್ಳು ಒಂದು ಕ್ಷಣ ಸಂತೋಷವನ್ನು ನೀಡುತ್ತದೆ, ಆದರೆ ಸತ್ಯ ಹೊರಬಂದಾಗ, ಕುಟುಂಬದ ಸಂತೋಷಕ್ಕೆ ಗ್ರಹಣವಾಗುತ್ತದೆ. ಈ ವಿಷಯ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಅನ್ವಯವಾಗುತ್ತದೆ.
ಕುಟುಂಬದ ಸದಸ್ಯರೊಂದಿಗೆ ಜಗಳ
ಮನೆಯಲ್ಲಿರುವ ಹೆಂಗಸರು ತಮ್ಮ ತಮ್ಮಲ್ಲಿ ಅಥವಾ ಕುಟುಂಬದ ಸದಸ್ಯರೊಂದಿಗೆ ಯಾವಾಗಲೂ ಜಗಳವಾಡುತ್ತಿದ್ದರೆ, ಲಕ್ಷ್ಮಿಯು ಆ ಮನೆಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಇದರಿಂದ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ. ಗರುಡ ಪುರಾಣದ ಪ್ರಕಾರ, ಮಹಿಳೆಯರ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳು ಮನೆಯ ಸಂತೋಷ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ.
ಕೆಟ್ಟವರ ಸಹವಾಸ ಮಾಡುವ ಮಹಿಳೆ
ಕೆಟ್ಟ ಸಹವಾಸ ಅಥವಾ ದುಷ್ಕೃತ್ಯಗಳಲ್ಲಿ ತೊಡಗುವ ಮಹಿಳೆಯರ ಮನೆಯನ್ನು ಲಕ್ಷ್ಮಿ ದೇವಿ ತೊರೆಯುತ್ತಾಳೆ ಎಂದು ಗರುಡ ಪುರಾಣ ಹೇಳುತ್ತದೆ. ಕೆಟ್ಟ ಸಹವಾಸ ಮತ್ತು ಸಮಾಜ ವಿರೋಧಿ ಚಟುವಟಿಕೆಗಳು ಮನೆಯ ವಾತಾವರಣವನ್ನು ಹಾಳು ಮಾಡುತ್ತವೆ ಮತ್ತು ಲಕ್ಷ್ಮಿ ದೇವಿಯು ಅಲ್ಲಿ ನೆಲೆಸುವುದಿಲ್ಲ. ಅಷ್ಟು ಮಾತ್ರವಲ್ಲ, ಪತಿಗೆ ಮೋಸ ಮಾಡಿ, ಪರಪುರುಷನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿರುವ ಮಹಿಳೆಯರಿರುವ ಸ್ಥಳದಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಇಂತಹ ಮಹಿಳೆಯರು ಮನೆಗ ಮಾತ್ರವಲ್ಲ, ಇಡೀ ಊರಿಗೆ ಕಳಂಕಿತರಾಗಿರುತ್ತಾರೆ.
ಮುಂಜಾನೆ ತಡವಾಗಿ ಏಳುವ ಮಹಿಳೆ
ಲಕ್ಷ್ಮಿ ದೇವಿಯು ಮುಂಜಾನೆ ಬೇಗ ಎದ್ದು ಶುದ್ಧರಾಗುವ ಮತ್ತು ಸಕ್ರಿಯವಾಗಿರುವ ಮಹಿಳೆಯರ ಮನೆಯನ್ನು ಇಷ್ಟಪಡುತ್ತಾಳೆ. ಮಹಿಳೆಯರು ಬೆಳಗ್ಗೆ ತಡವಾಗಿ ಎದ್ದು ಮನೆಯ ಕೆಲಸದಲ್ಲಿ ಸೋಮಾರಿತನ ತೋರಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ಗರುಡ ಪುರಾಣದ ಪ್ರಕಾರ, ಮುಂಜಾನೆ ಎದ್ದು ಮನೆಯನ್ನು ಸ್ವಚ್ಛಗೊಳಿಸುವುದರಿಂದ ಮನೆಯಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ ಮತ್ತು ಲಕ್ಷ್ಮಿಯು ಸಂತೋಷಗೊಳ್ಳುತ್ತಾಳೆ.
ಮನೆ ಸ್ವಚ್ಛಗೊಳಿಸುವಲ್ಲಿ ನಿರ್ಲಕ್ಷ್ಯ ತೋರುವ ಮಹಿಳೆ
ಗರುಡ ಪುರಾಣದ ಪ್ರಕಾರ, ಮಹಿಳೆಯು ಮನೆಯನ್ನು ಶುಚಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ, ಅದು ನೇರವಾಗಿ ಲಕ್ಷ್ಮಿಯ ಮೇಲೆ ಪರಿಣಾಮ ಬೀರುತ್ತದೆ. ಲಕ್ಷ್ಮಿಗೆ ಕೊಳಕು ಮತ್ತು ಅಶುಚಿಯಾದ ಮನೆಯಲ್ಲಿ ಇರಲು ಇಷ್ಟವಾಗುವುದಿಲ್ಲ. ಈ ಕಾರಣದಿಂದ ತಾಯಿ ಲಕ್ಷ್ಮಿ ಆ ಮನೆಯಲ್ಲಿ ನೆಲೆಸುವುದಿಲ್ಲ. ಅದಕ್ಕಾಗಿಯೇ ವಿಶೇಷವಾಗಿ ಮಹಿಳೆಯರು ಯಾವಾಗಲೂ ಮನೆಯ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಲಾಗುತ್ತದೆ.