ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಮತ್ತು ಗ್ಯಾಂಗ್ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
Darshan Arrest Case: ನಟ ದರ್ಶನ್ & ಗ್ಯಾಂಗ್ʼಗೆ ಮತ್ತೆ ನಿರಾಸೆ: ಆ.1ರ ವರೆಗೆ ಜೈಲೇ ಗತಿ
1. ಆರೋಪಿಗಳು ಕಿಡ್ನಾಪ್, ಕೊಲೆ, ಒಳ ಸಂಚು & ಸಾಕ್ಷಿನಾಶದಲ್ಲಿಭಾಗಿ
2. ನೇರವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆ
3. ಐ ವಿಟ್ನೇಸ್, ಟೆಕ್ನಿಲ್, ಡಿಜಿಟಲ್ ಸಾಕ್ಷಿಯಲ್ಲಿ ಧೃಢ
4. ಕೇಸ್ ನಲ್ಲಿ 83,55,500 ರೂಪಾಯಿ ಆರೋಪಿಗಳಿಂದ ಸೀಜ್
5. ಸೀಜ್ ಹಣ ನೀಡಿದ ವ್ಯಕ್ತಿಗಳ ಪತ್ತೆ ಬಾಕಿ ಇದೆ
6. ಹಣ ನೀಡಿದ ವ್ಯಕ್ತಿಗಳ ಹೇಳಿಕೆ ದಾಖಲಿಸಬೇಕು
7. ಜೊತೆಗೆ ಕೆಲ ಆರೋಪಿಗಳಿಂದ ಹಣದ ಮೂಲ ಪತ್ತೆ ಬಾಕಿ ಇದೆ
8. ಕೃತ್ಯಕ್ಕೆ ಬಳಸಿದ ವಾಹನಗಳ ಆರ್ ಸಿ ಮಾಲೀಕ ಪತ್ತೆ ಬಾಕಿ ಇದೆ
9. ಎಲ್ಲಾ ಆರೋಪಿಗಳು ಒಳಸಂಚು ಮಾಡಿರೋದು ಧೃಡ
10. ಸಾಕ್ಷಿನಾಶ ಮಾಡಲು ಒಳಸಂಚು ಮಾಡಿರೋದು ಧೃಡ
11. ಟೆಕ್ನಿಕಲ್, ಸೈಂಟಿಫಿಕ್ & ಫಿಸಿಕಲ್ ಸಾಕ್ಷಿಗಳ ನಾಶ ಮಾಡಿದ್ದು ಧೃಡ
12. ಎ 13 ದೀಪಕ್ ಬಳಸಿದ ಸ್ಕೂಟರ್ ಕಳ್ಳತನದ ಗಾಡಿ
13. ಹೆಬ್ಬಗೋಡಿ ಠಾಣೆಯಲ್ಲಿ ಕಳ್ಳತನ ಕೇಸ್ ಇರುವ ಗಾಡಿ
14. ಹೊಂಡಾ ಡಿಯೋ ಕೆ.ಎ- 51 ಹೆಚ್ಡಿ-9022 ಸ್ಕೂಟರ್15. ನಕಲಿ ಸಿಮ್ ಬಳಕೆ ಮಾಡಿದ್ದೆಕೆ ಎಙದು ತನಿಖೆ ಬಾಕಿ
16. FSL ವರದಿ ಬಳಿಕ ಮತ್ತಷ್ಟು ತನಿಖೆ ಬಾಕಿ ಇದೆ
17. ಮೊಬೈಲ್ ಡಾಟಾ ಒರಿಜಿನಲಿಟಿ ಚೆಕ್ ರಿಪೋರ್ಟ್ ಬರಬೇಕಿದೆ
18.ಸಿ.ಎಫ್.ಎಸ್.ಎಲ್ ಹೈದ್ರಾಬಾದ್ ವರದಿ ಬರಬೇಕಿದೆ
19. ಸೀಜ್ ಆಗಿರುವ ಸಿಸಿಟಿವಿ ಡಿವಿಆರ್ ರಿಟ್ರೀವ್ ಇನ್ನೂ ನಡೆಯುತ್ತಿದೆ
20. ಡಿವಿಆರ್ ಡಾಟಾ ಪಡೆದ ನಂತರ ತನಿಖೆ ಬಾಕಿ ಇದೆ
21. ಕೊಲೆ ಮುಂಚೆ ಕೊಲೆ ಬಳಿಕ ಅನೇಕರ ಜೊತೆ ಮಾತುಕತೆ
22. ಆ ವ್ಯಕ್ತಿಗಳ ಪತ್ತೆ ಮಾಡಿ ವಿಚಾರಣೆ ಬಾಕಿ ಇದೆ
23. ಈ ವೇಳೆ ಆರೋಪಿಗಳಿಗೆ ಜಾಮೀನು ನೀಡೋದು ಸೂಕ್ತವಲ್ಲ
24. ಸಾಕ್ಷ್ಯ ನಾಶ ಮಾಡುವ ಸಾದ್ಯತೆ ಜಾಸ್ತಿ ಇದೆ
25. ಇನ್ನೂ ಅನೇಕರ ಪ್ರತ್ಯಕ್ಷ & ಪರೋಕ್ಷ ವ್ಯಕ್ತಿಗಳ 164 ಬಾಕಿ ಇದೆ
26. ಹಣ ಬಲ, ಪ್ರಭಾವಿ ಬಲ ಇರುವ ಆರೋಪಿಗೆ ಜಾಮೀನಿಗೆ ಯೋಗ್ಯವಲ್ಲ
27. ಸಾಕ್ಷಿಗಳಿಗೆ ಬೆದರಿಕೆ ಹಾಕಿ ಸಾಕ್ಷಿ ಹೇಳದಂತೆ ತಡೆ ಸಾಧ್ಯ
28. ಪ್ರಕರಣದಲ್ಲಿ ಆರೋಪಿಗಳ ಪ್ರತ್ಯೇಕ ಪಾತ್ರದ ವಿಚಾರಣೆ ಬಾಕಿ
29. ಆರೋಪಿಗಳ ಸಂಪೂರ್ಣ ಪಾತ್ರದ ಸಾಕ್ಷಿ ಕಲೆ ಹಾಕಬೇಕು
30. ಪ್ರಕರಣದಲ್ಲಿ ಇನ್ನೂ ತನಿಖೆ ಹಂತದಲ್ಲಿದ್ದು ವಿಚಾರಣೆ ನಡೆಯುತ್ತಿದೆ
ಹೀಗಾಗಿ ಆರೋಪಿಗಳ ಜೈಲಿನಲ್ಲಿಯೇ ಇಡಲು ಸರ್ಕಾರದ ಮನವಿ