ಬೆಂಗಳೂರು ಉದ್ಯಾನ ನಗರಿ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.. ಇಲ್ಲಿನ ಶಾಪಿಂಗ್ ಮನಸ್ಸಿಗೆ ಮುದ ಹಾಗು ರೋಮಾಂಚನಕಾರಿ ಅನುಭುತಿಯನ್ನು ಉಂಟು ಮಾಡುತ್ತದೆ.
ಬೆಂಗಳೂರಿನ ಯಾವ ಜಾಗದಲ್ಲಿ ಶಾಪಿಂಗ್ ಮಾಡಿದರೆ ಕಡಿಮೆ ದುಡ್ಡಿನಲ್ಲಿ ಉತ್ತಮವಾದ ಸರಕುಗಳು ದೊರೆಯುತ್ತವೆ ಎಂಬುದನ್ನು ನಾವು ತಿಳಿಯೋಣ
1. ಕಮರ್ಷಿಯಲ್ ಸ್ಟ್ರೀಟ್
ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಶಾಪಿಂಗ್ ಮಾಡಲು ಅತ್ಯುತ್ತಮವಾದ ಸ್ಥಳವಾಗಿದೆ. ಇಲ್ಲಿ ಸುಂದರವಾದ ಉಡುಪುಗಳು, ವಿಭಿನ್ನ ಶೈಲಿಯ ಆಭರಣಗಳು, ಕ್ರೀಡಾ ಸಾಮಗ್ರಿಗಳು, ಸ್ಟೈಲೀಶ್ ಪಾದರಕ್ಷೆಗಳು, ಪುರಾತನ ವಸ್ತುಗಳನ್ನು ಇಲ್ಲಿ ನೀವು ಖರೀದಿಸಬಹುದು.
2. ಚಿಕ್ಕಪೇಟೆ
ಬೆಂಗಳೂರಿನ ಶಾಪಿಂಗ್ ಎಂದ ತಕ್ಷಣ ತಟ್ಟನೆ ನೆನಪಿಗೆ ಬರುವುದೇ ಚಿಕ್ಕಪೇಟೆ ಶಾಪಿಂಗ್. ಇದು ಬೆಂಗಳೂರು ನಗರದ ಅತ್ಯಂತ ಹಳೆಯ ವಾಣಿಜ್ಯ ತಾಣಗಳಲ್ಲಿ ಒಂದಾಗಿದೆ, ಇದು ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ. ಚಿಕ್ಕಪೇಟೆಗೆ ಸುಮಾರು ೪೦೦ ವರ್ಷಗಳ ಇತಿಹಾಸವಿದ್ದು, ಬೆಂಗಳೂರಿನ ಜನಪ್ರಿಯವಾದ ಮಾರುಕಟ್ಟೆಗಳಲ್ಲಿ ಚಿಕ್ಕಪೇಟೆಯೇ ಪ್ರಮುಖವಾದುದು.
3.ಜಯನಗರದ 4th Block,
ಚಿಕ್ಕಪೇಟೆ ಹಾಗು ಕಮರ್ಷಿಯಲ್ ಸ್ಟ್ರೀಟ್ ನಷ್ಟು ಜನಪ್ರಿಯವಾಗಿಲ್ಲದಿದ್ದರೂ, ತನ್ನದೇ ವಿಶಿಷ್ಟವಾದ ಶಾಪಿಂಗ್ ಸರಕುಗಳಿಂದ ಹೆಸರುವಾಸಿಯಾಗಿದೆ. ಬೆಂಗಳೂರಿನ ಬಹುತೇಕ ಮಂದಿಗೆ ಇಲ್ಲಿ ಶಾಪಿಂಗ್ ಮಾಡುವುದು ಆರಾಮದಾಯಕವೆಂದು ಪರಿಗಣಿಸುತ್ತಾರೆ. ಇಲ್ಲಿ ನಿಮ್ಮ ಕೈಗೆಟುವ ದರದಲ್ಲಿ ಬಟ್ಟೆಗಳು, ಚಪ್ಪಲಿಗಳು, ಫ್ಯಾನ್ಸಿ ಬ್ಯಾಗ್ ಗಳು ದೊರೆಯುತ್ತವೆ. ಮುಖ್ಯವಾಗಿ ಕಲಾಕೃತಿ, ಕುಂಬಾರಿಕೆ ಮತ್ತು ಶಿಲ್ಪಗಳನ್ನು ಖರೀದಿಸಲು ಜಯನಗರ ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ.
5.ಬ್ರಿಗೇಡ್ ರೋಡ್
ಬೆಂಗಳೂರಿನಲ್ಲಿನ ಶಿವಾಜಿ ನಗರದಲ್ಲಿರುವ ಬ್ರಿಗೇಡ್ ರೋಡ್ ಕೂಡ ಶಾಪಿಂಗ್ ಗೆ ಸೂಕ್ತವಾದ ತಾಣವಾಗಿದೆ. ಸಿಟಿ ಮಾರ್ಕೆಟ್ ನಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಬ್ರಿಗೇಡ್ ರಸ್ತೆ ಎಂಜಿ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆ ನಡುವೆ ಇದೆ.
6.ಮಲ್ಲೇಶ್ವರಂ ಶಾಪಿಂಗ್ಬೆಂಗಳೂರಿನ ಅತ್ಯಂತ ಜನಪ್ರಿಯವಾದ ಮಾರುಕಟ್ಟೆಗಳಲ್ಲಿ ಮಲ್ಲೇಶ್ವರಂ ಕೂಡ ಒಂದಾಗಿದೆ. ಇಲ್ಲಿ ಎಲ್ಲಾ ವಸ್ತುಗಳು ಕೂಡ ಒಂದೇ ಸೂರಿನಲ್ಲಿ ದೊರೆಯುತ್ತದೆ. ಬಟ್ಟೆಗಳಿಂದ ಹಿಡಿದು, ಗಿಡಮೂಲಿಕೆಗಳು, ಹೂವಿನ ಮಾರುಕಟ್ಟೆಗಳು, ಮಸಾಲೆ ಪದಾರ್ಥಗಳು, ತರಕಾರಿಗಳು ದೊರೆಯುತ್ತವೆ. ಈ ಸ್ಥಳಕ್ಕೆ ಮಲ್ಲೇಶ್ವರಂ ಎಂಬ ಹೆಸರು ಬರಲು ಕಾರಣವೆನೆಂದರೆ, ಸಮೀಪದಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನದಿಂದಲೇ ಆಗಿದೆ.