ಬೆಂಗಳೂರು: ಕರ್ನಾಟಕ ಪ್ರಭಾವಿ ಸಚಿವರನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಲು ಪ್ರಯತ್ನ ಪಟ್ಟಿದ್ದಾರೆ ಎಂಬ ಸುದ್ದಿ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ. ತುಮಕೂರು ಮೂಲದ ಸಚಿವರನ್ನ ಹನಿಟ್ರ್ಯಾಪ್ ಮಾಡುವುದಕ್ಕೆ ಯತ್ನಿಸಲಾಗಿದೆಯಂತೆ. ಆದ್ರೆ ಹನಿಟ್ರ್ಯಾಪ್ ಮಾಡೋಕೆ ಬಂದಿದ್ದಾರೆ ಎಂದು ಅನುಮಾನ ಬರುತ್ತಿದ್ದಂತೆಯೇ ಸಚಿವರು ಎಚ್ಚೆತ್ತುಕೊಂಡಿದ್ದಾರೆ. ಈಗ ಇದೇ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಆಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಆಗಿದೆ.
ಗುಡ್ ನ್ಯೂಸ್.. ಇನ್ಮುಂದೆ EPF ಕ್ಲೈಮ್ ಸೆಟಲ್ಮೆಂಟ್ʼಗಳನ್ನು ಕೇವಲ 3 ದಿನಗಳಲ್ಲಿ ಪೂರ್ಣಗೊಳಿಸಬಹುದು!
ಅದನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೇನೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಇದರಲ್ಲಿ ನಮ್ಮವರು ಅಷ್ಟೇ ಅಲ್ಲ. ಬೇರೆ ಪಕ್ಷದ ನಾಯಕರು ಹನಿಟ್ರ್ಯಾಪ್ನಲ್ಲಿ ಸಿಲುಕಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು. ಈ ವಿಚಾರವಾಗಿ ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.