ಬೆಂಗಳೂರು:– ಬನಶಂಕರಿ ಫುಟ್ಪಾತ್ ತೆರವು ವೇಳೆ ಗಲಾಟೆ ಗದ್ದಲ ನಡೆದಿದ್ದು, ಪಾಲಿಕೆ ಜೊತೆ ಬೀದಿಬದಿ ವ್ಯಾಪಾರಿಗಳು ಮಾತಿನ ಚಕಮಕಿ ನಡೆದಿದೆ.
ಮಾರ್ಷಲ್ಸ್ ಜೊತೆ ಪೋಲಿಸ್ ಜೊತೆಗೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಚರಣೆಗೆ ಮುಂದಾಗಿದ್ರು. ಈ ವೇಳೆ ವ್ಯಾಪಾರಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯ್ತು. ಪಾಲಿಕೆ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಬೆಂಗಳೂರು ಜಿಲ್ಲಾ ಬೀದಿ ಬದಿ ವ್ಯಾಪಾರಿ ಸಂಘದ ಪರ ವಕೀಲರು ಸ್ಥಳದಲ್ಲಿ ಹಾಜರಿದ್ದರು. ಕಾನೂನು ಪುಸ್ತಕ ಹಿಡ್ಕೊಂಡು ವಕೀಲರು ನಿಯಮಗಳನ್ನು ಹೇಳುತ್ತಿದ್ದ ಹಾಗೆ ಅಧಿಕಾರಿಗಳು ಸೈಲೆಂಟ್ ಆಗಿ ಕಾಲ್ಕಿತ್ರು.
ಅಧಿಕಾರಿಗಳ ನಡೆಗೆ ಬನಶಂಕರಿ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ವಕ್ತಪಡಿಸಿದ್ರು.. ಏಕಾಏಕಿ ತೆರವು ಮಾಡಿದ್ರೆ ನಮ್ಮ ಕುಟುಂಬದ ಗತಿ ಏನು..?! ಪರ್ಯಾಯ ವ್ಯವಸ್ಥೆ ಕಲ್ಪಿಸಿ, ನಂತರ ತೆರವು ಮಾಡಿ. ನಾವು ವ್ಯಾಪಾರಕ್ಕೆ ಲೈಸೆನ್ಸ್ ಪಡೆದಿದ್ದೇವೆ ಅಂತಾ ಗುಡುಗಿದ್ದರು.