ಭಾರತೀಯ ಬೌಲರ್ ಗಳಿಗೆ ಅಗೌರವ ಸೂಚಿಸಬೇಡಿ. ಆದರೆ ಎದುರಾಳಿ ತಂಡದ ಬ್ಯಾಟರ್ ಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಹ ಬೌಲರ್ ಗಳು ಒಬ್ಬರು ಇಲ್ಲ. ಆದರೂ ಎದುರಾಳಿ ಬ್ಯಾಟ್ಸ್ ಮನ್ ಗಳು ಇವರ ಬೌಲಿಂಗ್ ನಲ್ಲಿ ರನ್ ಗಳಿಸಲು ಹಿಂಜರಿಯುತ್ತಾರೆ. ಟೀಮ್ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರಂತಹ ವಿಶ್ವ ಶ್ರೇಷ್ಠ ಬೌಲರ್ ಗಳಿದ್ದರೂ, ಯಾರೂ ಅಪಾಯಕಾರಿಯಾಗಿಲ್ಲ, ಆದರೆ ಆ ತಂಡದ ಬ್ಯಾಟರ್ ಗಳು ಸಾಕಷ್ಟು ಅಪಾಯಕಾರಿ ಆಗಿ ಗೋಚರಿಸುತ್ತಾರೆ,” ಎಂದು ಅಹ್ಮದ್ ಶೆಹಜಾದ್ ಹೇಳಿದ್ದಾರೆ.
ಭಾರತ ತಂಡವು ಯಾವಾಗಲೂ ವಿಶ್ವಶ್ರೇಷ್ಠ ಬ್ಯಾಟರ್ ಗಳನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸುತ್ತ ಬಂದಿದೆ. ಈ ತಂಡದ ನಾಯಕ ರೋಹಿತ್ ಶರ್ಮಾ, ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ನೆಲದಲ್ಲಿ ಆಡುವ ಮೂಲಕ ಅಲ್ಲಿನ ಅಭಿಮಾನಿಗಳನ್ನು ರಂಜಿಸಬೇಕು ಎಂದು ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ ಹೇಳಿದ್ದಾರೆ.

ನದಿರ್ ಅಲಿ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂವಾದದಲ್ಲಿ ತಾವು ಎದುರಿಸಿದ ಪಾಕಿಸ್ತಾನದ ಅಪಾಯಕಾರಿ ಬೌಲರ್ ಕುರಿತು ಅಹ್ಮದ್ ಶೆಹಜಾದ್ ರನ್ನು ಪ್ರಶ್ನಿಸಲಾಯಿತು.
“ನಾನು ಶೋಯೆಬ್ ಅಖ್ತರ್ ಅವರನ್ನು ಬಿಟ್ಟು ಬೇರೆ ಬೌಲರ್ ಗಳ ಹೆಸರು ಸೂಚಿಸಲು ಇಷ್ಟಪಡುವುದಿಲ್ಲ. ನಾನು ಪಾಕಿಸ್ತಾನದ ತಂಡದ ಪರ ಪದಾರ್ಪಣೆ ಮಾಡುವ ವೇಳೆಗೆ ಅವರು ನಿವೃತ್ತಿಯ ಹಂಚಿನಲ್ಲಿದ್ದರು. ಆದ್ದರಿಂದ ಶೋಯೆಬ್ ಅಖ್ತರ್ ಅವರನ್ನು ಹಳೆಯ ಚೆಂಡಿನಲ್ಲಿ ಆರರಿಂದ ಎಂಟು ರಿವರ್ಸ್ ಸ್ವಿಂಗ್ ಎಸೆತಗಳನ್ನು ಎದುರಿಸಿದ್ದೇನೆ ಅಷ್ಟೇ” ಎಂದು ಶೆಹಜಾದ್ ಹೇಳಿದ್ದಾರೆ.
