ಬೆಂಗಳೂರು: ನಿಮ್ಮಬಳಿ ಅಡಮಾನ ಇಡಲು ಆಸ್ತಿ ಇದೆಯ.ಅಷ್ಟು ಸಾಕು ಸಾಲ ನಾವು ಕೊಡ್ತಿವಿ ಅಂತ ಲಕ್ಷ ಲಕ್ಷ ಸಾಲ ಕೊಡುವ ಬ್ಯಾಂಕ್ ಇರುತ್ವೆ.ಆದರೆ ಒಂದು ಕೈಲಿ ಸಾಲ ಕೊಟ್ಟು ಮತ್ತೊಂದು ಕೈಲಿ ಹಣ ದೋಚುವ ಬ್ಯಾಂಕ್ ಗಳು ಕೂಡ ಇವೆ.ಇಂತಹ ಬ್ಯಾಂಕ್ ನಿಂದ ಲಕ್ಷಾನುಗಟ್ಟಲೆ ಸಾಲ ಪಡೆದು ಕ್ಷಣದಲ್ಲೆ ಆ ಹಣವನ್ನ ಅದೇ ಬ್ಯಾಂಕ್ನವರು ಕಬಳಿಸ್ತಾರೆ.ಅಷ್ಟಕ್ಕೂ ಯಾವುದು ಆ ಖತರ್್ನಾಕ್ ಬ್ಯಾಂಕ್, ಇವರು ಮಾಡಿದ್ದೇನು ಅಂತ ತಿಳಿಬೇಕ ಈ ಸ್ಟೋರಿ ನೋಡಿ.
ಇವರ ಹೆಸರು ಅಕ್ರಮ್ ಬೆಂಗಳೂರಿನ ಕದಿರೇನಹಳ್ಳಿ ನಿವಾಸಿ.ಅವಶ್ಯಕತೆಗಾಗಿ ತನ್ನ ಜಮೀನನ್ನು ಅಡವಿಟ್ಟು ಹತ್ತು ಲಕ್ಷ ಸಾಲ ಪಡೆಯಲು ಮುಂದಾಗಿದ್ದಾರೆ.ಅದರಂತೆ ಇವರಿಗೆ ಬ್ಯಾಂಕ್್ನಲ್ಲಿ ಹತ್ತು ಲಕ್ಷ ಸಾಲವು ದೊರೆತು,ಇವರ ಖಾತೆಗೆ ಜಮಾ ಆಗಿದೆ.ಆದರೆ ಜಮಾ ಆದ ಕೆಲವೆ ನಿಮಿಷಗಳಲ್ಲಿ ಹತ್ತು ಲಕ್ಷಗಳಲ್ಲಿ ಆರು ಲಕ್ಷದ ಐವತ್ತು ಸಾವಿರ ಹಣ ಶ್ರೀಧರ್ ಎನ್ನುವವರ ಖಾತೆಗೆ ವರ್ಗಾವಣೆ ಆಗಿದೆ.ಇದರಿಂದ ಆತಂಕಕ್ಜೆ ಒಳಗಾದ ಅಕ್ರಮ್ ಮರುದಿನವೆ ಬ್ಯಾಂಕ್ ಗೆ ತೆರಳಿ ವಿಚಾರಿಸಿದಿದ್ದಾರೆ. ಬ್ಯಾಂಕ್ ಸಿಬ್ಬಂದಿ ತಕ್ಷಣವೇ ಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳಿದ್ದಾರೆ.ಆದರೆ ಇದಿವರೆಗು ಸಮಸ್ಯೆ ಬಗೆಹರಿದಿಲ್ಲ.
ಹೀಗೆ ಒಂದು ವರ್ಷದಿಂದ ಇದೇ ಹಾರಿಕೆ ಉತ್ತರವನ್ನು ಕೊಡುತ್ತಾ ಬಂದಿರುವ ಬ್ಯಾಂಕ್ ಸಿಬ್ಬಂದಿ, ಕೊನೆಗೆ ನಾವು ಏನೂ ಮಾಡಲು ಆಗುವುದಿಲ್ಲ.ನೀವು ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಕೊಡಿ ಇಲ್ಲ ಬಿಡಿ ಆದರೆ ಬಡ್ಡಿ ಕಟ್ಟಿ ಅಂತ ಹೇಳಿದ್ದಾರೆ.ಅಷ್ಟಕ್ಕೂ ಈ ರೀತಿ ಉಡಾಫೆಯಾಗಿ ನಡೆದುಕೊಂಡು ಬೇಜವಾಬ್ದಾರಿಯ ಹಾರಿಕೆ ಉತ್ತರ ನೀಡಿರುವುದು ಇದೇ ಬ್ಯಾಂಕ್. ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಹೆಸರಲ್ಲಿ ಇರುವ ಕೇರ್ ಇವರು ಮಾಡುವ ಕೆಲಸದಲ್ಲಿ ಇಲ್ಲ.ಹೀಗಾಗಿಯೆ ಈ ಬ್ಯಾಂಕ್ ನಿಂದ ಅನೇಕರು ಇದೇ ರೀತಿಯಲ್ಲಿ ಮೋಸ ಹೋಗಿದ್ದಾರೆ.
ಅಂದಹಾಗೆ ಇಲ್ಲಿ ಶ್ರೀಧರ್ ಎನ್ನುವ ವ್ಯಕ್ತಿ ನಾಮಕವಸ್ತೆಯ ವಿಲನ್.ಅಸಲಿ ವಿಲನ್ ಈ ಮ್ಯಾನೇಜರ್. ಶ್ರೀಧರ್ ಈ ಮ್ಯಾನೇಜರ್ ಸ್ನೇಹಿತರು.ಗ್ರಾಹಕರ ಸಾಲದ ಹಣ ಶ್ರೀಧರ್ ಖಾತೆ ಸೇರಿದಮೇಲೆ,ಮ್ಯಾನೇಜರ್ ಕೈ ಸೇರತ್ತೆ.ಇದೇ ರೀತಿಯಾಗಿ ಈ ಇಬ್ಬರು ಗೋಲ್ ಮಾಲ್ ಮಾಡಿ ಸಾಕಷ್ಟು ಗ್ರಾಹಕರಿಗೆ ವಂಚಿಸಿದ್ದಾರೆ. ಈಗಾಗಲೇ ಈ ಬ್ಯಾಂಕ್ ಮೇಲೆ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಏಳು ಎಂಟು ಜನ ದೂರು ದಾಖಲಿಸಿದ್ದಾರೆ.
ಬೈಟ್;ಅಕ್ರಮ್ ,ವಂಚನೆಗೊಳಗಾದ ಗ್ರಾಹಕ.
ಒಟ್ಟಿನಲ್ಲಿ ಬೇಲಿಯೆ ಎದ್ದು ಹೊಲ ಮೇಯ್ದರೆ ಜನ ಏನು ಮಾಡಬೇಕು.ಕಷ್ಟ ಅಂತ ಇದ್ದ ಆಸ್ತಿಯನ್ನು ಅಡ ಇಟ್ಟು ಸಾಲ ಪಡೆದರೆ ಇಂತಹ ಹೆಗ್ಣಣಗಳು ಆ ಸಾಲದ ಹಣವನ್ನು ಕದ್ದು ತಿಂದರೆ ಜನರು ಏನು ಮಾಡಬೇಕು ಎಲ್ಲಿ ಹೋಗಬೇಕು.