ಬೆಂಗಳೂರು: ಕ್ರಿಸ್ ಮಸ್ ಗೆ ಅಂತ ಶುಭಕೋರಲು ಬಂದಿದ್ದ ಯುವಕ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಎಂ.ವಿ.ಗಾರ್ಡನ್ ನಲ್ಲಿ ನಡೆದಿದೆ. ಮಿನ್ಯೂಷ್ ಎಂಬ ಕೊಲೆಯಾದ ದುರ್ದೈವಿ ಯುವಕ. ಡಿಸೆಂಬರ್ 24ರಂದು ನಡೆದಿದ್ದ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಯುವಕನ ಸ್ನೇಹಿತನನ್ನು ಬಂಧಿಸಿದ್ದಾರೆ.
ಸಂತೋಷ್ ಎಂಬಾತ ತನ್ನ ಸ್ನೇಹಿತ ಮಿನ್ಯೂಷ್ ಎಂಬಾತನ ಮನೆಗೆ ಹೋಗಿದ್ದ. ಈ ವೇಳೆ ಮಿನ್ಯೂಷ್ ಕೆಲ ಯುವಕರೊಂದಿಗೆ ಗಲಾಟೆ ಮಾಡುತ್ತಿದ್ದ. ಈ ವೇಳೆ ಜಗಳ ಬಿಡಿಸಲೆಂದು ಹೋದ ಸಂತೋಷ್ ಮೇಲೆಯೇ ಮಿನ್ಯೂಷ್ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಸಂತೋಷ್ ಸ್ಥಳದಿಂದ ವಾಪಸ್ ಆಗಿದ್ದಾನೆ.

ಆದರೆ ತನ್ನ ಮೇಲೆಯೇ ಹಲ್ಲೆ ನಡೆಸಿದನಲ್ಲ ಎಂದು ಕೋಪಗೊಂಡು ಇನ್ನೊಬ್ಬ ಸ್ನೇಹಿತ ಅಜಯ್ ಎಂಬಾತನ ಜೊತೆ ಸೇರಿ ಮಿನ್ಯೂಷ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆರೋಪಿಗಳಾದ ಸಂತೋಷ್ ಹಾಗೂ ಅಜಯ್ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
