ಬೆಂಗಳೂರು: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ ನಡೆಯುತ್ತಲೇ ಇದೆ. ಈ ಹಿಂದೆ 7 ತಿಂಗಳ ಗರ್ಭಿಣಿಯಾ ಗಿದ್ದಾಗ ಮಗುವೊಂದು ಸಾವನ್ನಪ್ಪಿದ್ದು, ಬಳಿಕ ಸಮನ್ವಿ ಹುಟ್ಟಿದ್ದಳು. ಆದರೆ ಇದೀಗ ಈಕೆಯನ್ನೂ ಅಮೃತಾ ಕಳೆದುಕೊಂ ಡಿದ್ದಾರೆ. ಹೌದು. ಅಮೃತಾಗೆ ಮೃತ ಸಮನ್ವಿ ಎರಡನೇ ಮಗಳು. ಮೊದಲ ಮಗು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಸಮನ್ವಿ ಬಂದ ಬಳಿಕ ಬದುಕಿನಲ್ಲಿ ನಗು ಮೂಡಿತ್ತು ಎಂದು ಹಲವು ಬಾರಿ ಅಮೃತಾ ಹೇಳಿದ್ದರು.
ಆದರೆ ಇದೀಗ ಮತ್ತೆ ಅಮೃತಾ ಅವರ ಬಾಳಲ್ಲಿ ಮತ್ತೆ ನಗು ಮಾಸಿದೆ. ಸದ್ಯ 4 ತಿಂಗಳು ಗರ್ಭಿಣಿಯಾಗಿರುವ ಅಮೃತಾ ನಾಯ್ಡು ಹಲವು ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದರು. ಆದರೆ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಸೀರಿಯಲ್ ನಿಂದ ನಟಿ ಹೊರಬಂದಿದ್ದರು. ಈ ನಡುವೆ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ದಲ್ಲಿ ಅಮ್ಮ ಮಗಳು ಸ್ಪರ್ಧಿಗಳಾಗಿದ್ದರು. ಅಮೃತಾ ಗರ್ಭಿಣಿಯಾಗಿರುವ ಕಾರಣ ಡಾನ್ಸ್ ಹಾಗೂ ಹಲವು ಟಾಸ್ಕ್ ಕಷ್ಟ ಅನ್ನುವ ಕಾರಣ ಕಳೆದ ವಾರ ಎಲಿಮನೇಟ್ ಆಗಿ ಹೊರಬಂದಿದ್ದರು.
