ಮಂಡ್ಯ: ಮಂಡ್ಯ ನಗರದ ಜನತೆಗೆ ರಾಜ್ಯ ಸರ್ಕಾರ ಹೊಸ ವರ್ಷದ ಗಿಫ್ಟ್ ಕೊಟ್ಟಿದ್ದು, ನೀರಿನ ದರವನ್ನು 225ರೂ. ಗೆ ನಿಗದಿಗೊಳಿಸಿ ಆದೇಶಿಸಿದೆ. ಹೌದು ಮಂಡ್ಯದಲ್ಲಿಂದು ಶಾಸಕ ಗಣಿಗ ರವಿಕುಮಾರ್ ಸುದ್ದಿಗೋಷ್ಟಿ ನಡೆಸಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಸರ್ಕಾರ ಈ ಹಿಂದೆ 282 ರೂ ಇದ್ದ ನೀರಿನ ದರವನ್ನು ಪರಿಷ್ಕರಿಸಿ 282 ರಿಂದ 225ರೂ. ಗೆ ನಿಗದಿ ಪಡಿಸಿದ್ದು, ಮಂಡ್ಯ ನಗರದ 20757 ಸಾವಿರ ಕುಟುಂಬಕ್ಕೆ ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ.
ಜನರು ಹಲವು ವರ್ಷಗಳಿಂದ ನೀರಿನ ಪರಿಷ್ಕರಣೆಗೆ ಒತ್ತಾಯಿಸಿದ್ದರು. ಈ ಹಿನ್ನಲೆ ಸಭೆ ನಡೆಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಹೊಸ ನೀರಿನ ದರ ನಿಗದಿಪಡಿಸಲಾಗಿತ್ತು. ಡಿಸೆಂಬರ್ 1ರಿಂದಲೇ ಹೊಸ ನೀರಿನ ದರ ಜಾರಿಯಾಗಿದೆ. 44.51 ಕೋಟಿ ನೀರಿನ ಬಾಕಿಯಿದ್ದು,
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
27.66 ಕೋಟಿ ಅಸಲು, 16.91 ಕೋಟಿ ಬಡ್ಡಿ ಇದೆ. ಬಡ್ಡಿ ಮನ್ನಾ ಮಾಡಿಸಲು ಸರ್ಕಾರದ ಜೊತೆ ಚರ್ಚಿಸಲು ಪ್ರಯತ್ನ ಮಾಡ್ತೇನೆ ಎಂದ ಶಾಸಕ ಗಣಿಗ ರವಿಕುಮಾರ್, ರಾಜ್ಯ ಸರ್ಕಾರ ನಮ್ಮ ಜನರ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದೆ. ಮಂಡ್ಯ ಜನತೆ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದರು.