ಸೆಪ್ಟೆಂಬರ್ 30 ರ ಒಳಗಾಗಿ ಕಬ್ಬಿನ ಹೆಚ್ಚುವರಿ ದರ 150 ರೂ ಬಾಕಿ ಕೊಡಿಸದಿದ್ದರೆ , ಪ್ರಸಕ್ತ ಸಾಲಿನ ಕಬ್ಬಿನ ಎಫ್ ಎಫ್ ಆರ್ ಪಿ ದರ ಏರಿಕೆ ಮಾಡದಿದ್ದರೆ ಬೆಂಗಳೂರು ವಿಧಾನಸೌಧದ ಎದುರು ಕಬ್ಬು ಬೆಳೆಗಾರರು ನಿರಂತರ ಪ್ರತಿಭಟನೆ ಮಾಡಲಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ರಾಜ್ಯದ 30 ಲಕ್ಷ ಕಬ್ಬು ಬೆಳೆಗಾರರು ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ ಕಬ್ಬು ಬೆಳೆ ಒಣಗುತ್ತಿದೆ ಶೇಕಡ 40ರಷ್ಟು ಇಳುವರಿ ಕಡಿಮೆಯಾಗಿದೆ. ಕಬ್ಬಿಗಾಗಿ ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸಲು ಪೈಪೋಟಿ ನಡಿಸುತ್ತಿದ್ದಾರೆ ಸಕ್ಕರೆ ಉತ್ಪಾದನೆ ಕಡಿಮೆ ಯಾಗಿರುವ ಕಾರಣ ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧ ಏರಿದ್ದಾರೆ, ಆದರೆ ಕಬ್ಬಿನ ಎಫ್ ಆರ್ ಪಿ ದರವನ್ನು ಕಳೆದ ವರ್ಷಕ್ಕಿಂತ ಕೇವಲ 100 ರೂ ಮಾತ್ರ ಏರಿಕೆ ಮಾಡಿ 3150 ನಿಗದಿ ಮಾಡಿ ಅನ್ಯಾಯ ಮಾಡಿದೆ,

ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಎತೆನಾಲ್ ಉತ್ಪಾದನೆ ಮಾಡಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ, ಆದರೆ ಕಬ್ಬು ಬೆಳೆಗಾರರು ಬೆಲೆ ಕಡಿಮೆ ಎಂದು ಪ್ರತಿಭಟನೆ ನಡೆಸಿದಾಗ ರಾಜ್ಯ ಸರ್ಕಾರ ಎರಡು ಸಭೆ ನಡೆಸಿದ್ದರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಇನ್ನು 15 ದಿನ ಕಾದು ನೋಡುತ್ತೇವೆ. ನಿರ್ಲಕ್ಷ್ಯ ಮಾಡಿದರೆ ಹೋರಾಟದ ಮುಖಾಂತರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಲಕ್ಷ್ಮೀಪುರ ವೆಂಕಟೇಶ್, ಹೆಗ್ಗೂರು ರಂಗರಾಜ್,ಕಾಟೂರು ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ ಇದ್ದರು.
