ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದ 5 ಆನೆಗಳು ಗುರುವಾರ ಕಾಡಿನಿಂದ ನಾಡಿಗೆ ಹೊರಟಿವೆ. ಈ ಬಾರಿಯೂ ಅಭಿಮನ್ಯು ಕ್ಯಾಪ್ಟನ್ ಆಗಿದ್ದು, ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯು ತಂಡಕ್ಕೆ ಇಂದು ಮಹೇಂದ್ರ, ಸುಗ್ರೀವ, ಹಿರಣ್ಯ, ಲಕ್ಷ್ಮಿ ಮತ್ತು ಪ್ರಶಾಂತ ಆನೆಗಳು ಸೇರ್ಪಡೆಯಾಗಲಿವೆ.
ಡಯಟ್, ವ್ಯಾಯಾಮ ಯಾವುದೂ ಇಲ್ಲದೇ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
ವೀರನಹೊಸಹಳ್ಳಿಯಲ್ಲಿ ಆ.21ರಂದು ವಿದ್ಯುಕ್ತವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ತಂಡದಲ್ಲಿ ಅಭಿಮನ್ಯು, ಗೋಪಿ, ಭೀಮ, ಧನಂಜಯ, ರೋಹಿತ, ಏಕಲವ್ಯ ಕಂಜನ್, ವರಲಕ್ಷ್ಮಿ ಮತ್ತು ದೊಡ್ಡ ಹರವೆ ಆನೆ ಶಿಬಿರದ ಲಕ್ಷ್ಮಿ ಆನೆಗಳು ಮೈಸೂರಿಗೆ ಆಗಮಿಸಿದ್ದವು. ಸೆ.5ರ ಸಂಜೆ ಎರಡನೇ ಹಂತದಲ್ಲಿ 5 ಆನೆಗಳು ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದು, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗಜಪಡೆಗೆ ಮರಳು ಮೂಟೆ ತಾಲೀಮು:
ಈಗಾಗಲೆ ಅರಮನೆ ಅಂಗಳದಲ್ಲಿರುವ ಮೊದಲ ಬ್ಯಾಚ್ನ ಆನೆಗಳಿಗೆ ಮರಳು ಮೂಟೆ ಹೊರುವ ತಾಲೀಮು ನೀಡಲಾಗುತ್ತಿದೆ. ಅರಮನೆಯಿಂದ ಸಯ್ಯಾಜೀರಾವ್ ರಸ್ತೆ, ಆಯುವೇರ್ದಿಕ್ ವೃತ್ತದ ಮೂಲಕ ಜಂಬೂ ಬಜಾರ್ ತಲುಪಿ ಹೈವೇ ಸರ್ಕಲ್ ಮೂಲಕ ದಸರಾ ಗಜಪಡೆ ಬನ್ನಿಮಂಟಪ ತಲುಪಲಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ತಾಲೀಮು ನಡೆಯುತ್ತಿದೆ.