ಮಂಡ್ಯ:-ಮನೆ ಕಳ್ಳರಿಗೆ ಸಹಕಾರ ನೀಡುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ರನ್ನು ಅರೆಸ್ಟ್ ಮಾಡಲಾಗಿದೆ.
ಕೆಂಡಗಣ್ಣಯ್ಯ, ಡಾಲಿ, ಭವನ್, ಸಾದನ್, ಅಯೂಬ್, ಮುನ್ನಾ, ಪ್ರಸಾದ್, ಫಯಾಜ್ ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 1 ಕೆಜಿ 486 ಗ್ರಾಂ ಚಿನ್ನಾಭರಣ, 1.70 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಮನೆಗಳ್ಳತನ ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಹಾಯ ಮಾಡುತ್ತಿದ್ದರು. ಕಳೆದ ತಿಂಗಳು ಮದ್ದೂರಿನಲ್ಲಿ ವೈದ್ಯ ಚಂದ್ರು ಮನೆಯಲ್ಲಿ ಕಳ್ಳತನ ನಡೆದಿದ್ದು, ಆರೋಪಿಗಳು 1 ಕೆಜಿ ಚಿನ್ನಾಭರಣ ಹಾಗೂ 8 ಲಕ್ಷ ರೂ. ನಗದು ದೋಚಿದ್ದರು.
ಬಂಧಿತ 8 ಆರೋಪಿಗಳಿಂದ 5 ಮನೆಗಳ್ಳತನ ಪ್ರಕರಣಗಳು ಬಯಲಾಗಿದೆ. ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಾಥ್ ನೀಡುತ್ತಿದ್ದರು. ಆರೋಪಿಗಳು ಕದ್ದ ಚಿನ್ನಾಭರಣವನ್ನು ಕೆಂಡಗಣ್ಣಯ್ಯ ಅಡವಿಟ್ಟುಕೊಡುತ್ತಿದ್ದರು. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು ಎನ್ನಲಾಗಿದೆ.