ಬೆಂಗಳೂರು: ರಾಜಾಜಿನಗರ ಕ್ಷೇತ್ರದ ESI ಆಸ್ಪತ್ರೆಯ ಆವರಣದಲ್ಲಿ 1 ನಿಮಿಷಕ್ಕೆ 1000 ಲೀಟರ್ ಆಮ್ಲಜನಕ ಉತ್ಪಾದಿಸುವ ಆಕ್ಸಿಜನ್ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ್ಮಿಕ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ರವರು ಲೋಕಾರ್ಪಣೆ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಶಾಸಕ ಸುರೇಶ್ ಕುಮಾರ್ ಎಸ್. ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿ ಈ ಘಟಕವನ್ನು ಪಿಎಂ ಕೇರ್ಸ್ ಅನುದಾನದಡಿ DRDO ಸಂಸ್ಥೆ ನಿರ್ಮಿಸಿ ಕೊಟ್ಟಿದೆ ಎಂದು ತಿಳಿಸಿದರು. ಪಿಎಂ ಕೇರ್ ನಿಧಿಯಿಂದ ತಲೆಎತ್ತಲಿರುವ ಈ ಘಟಕಗಳಿಂದ 4 ಲಕ್ಷಕ್ಕಿಂತ ಹೆಚ್ಚಿನ ಆಕ್ಸಿಜನೇಟೆಡ್ ಬೆಡ್ ಗಳಿಗೆ ಆಮ್ಲಜನಕ ಪೂರೈಕೆ ಯಾಗಲಿದೆ, ಆಮ್ಲಜನಕ ಉತ್ಪಾದನೆ ಘಟಕಗಳು ಸಕಾಲದಲ್ಲಿ ಉತ್ಪಾದನೆ ಆರಂಭಿಸಲು ಸರ್ಕಾರ ಸೂಚನೆ ನೀಡಿದೆ ಎಂದರು.
