ಆಮೀನಗಡ;- ಪಟ್ಟಣದ ಬಸ್ ನಿಲ್ದಾಣದ ಬಳಿ ಕಬಾಬ್ ಖಾಲಿ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಯುವಕನೋರ್ವ ಚಾಕು ಇರಿದು ಕೊಲೆ ಮಾಡಿರುವ ಘಟನೆ ಜರುಗಿದೆ.
ಗೈಬುಸಾಬ್ ಮುಲ್ಲಾ (34) ಹತ್ಯೆಯಾದ ದುರ್ದೈವಿ. ಮುಸ್ತಕಾ ಜಂಗಿ(22) ಕೊಲೆ ಮಾಡಿದ ಆರೋಪಿ.

ಪಟ್ಟಣದ ಬಸ್ ನಿಲ್ದಾಣ ಬಳಿಯಿರುವ ಎಗ್ರೈಸ್ ಮತ್ತು ಕಬಾಬ್ ಅಂಗಡಿಗೆ ಭಾನುವಾರ ಆರೋಪಿ ಮುಸ್ತಾಕ ಜಂಗಿ ಎಂಬ ಯುವಕ ಎಗ್ರೈಸ್ ತಿಂದು ಕಬಾಬ್ ಕೇಳಿದ್ದಾನೆ ಆಗ ಕಬಾಬ್ ಖಾಲಿ ಆಗಿದೆ ಎಂದು ಅಂಗಡಿ ಮಾಲೀಕ ಗೈಬುಸಾಬ್ ಮುಲ್ಲಾ ಹೇಳಿದ್ದಾರೆ, ಇದರಿಂದ ಸಿಟ್ಟುಗೊಂಡ ಯುವಕ ಮುಸ್ತಾಕ ಜಂಗಿ ಅಂಗಡಿ ಮಾಲೀಕನಿಗೆ ಅವಾಚ್ಯ ಪದ ಬಳಿಸಿದ್ದಾನೆ,ಅವಾಚ್ಯ ಪದ ಬಳಸಬೇಡ ಎಂದು ಮಾಲೀಕ ಹೇಳಿದ್ದಾನೆ ನಂತರ ಅಲ್ಲಿಂದ ಹೊರಟ ಹೋದ ಆರೋಪಿ ಯುವಕ ಮುಸ್ತಾಕ ಜಂಗಿ ಮರಳಿ ಬಂದು ರಾತ್ರಿ 9.30ರ ಸುಮಾರಿಗೆ ಮನೆಗೆ ಹೋಗಲು ಸಿದ್ದತೆ ನಡೆಸಿದ್ದ ಅಂಗಡಿ ಮಾಲೀಕ ಗೈಬುಸಾಬ ಮುಲ್ಲಾ ಅವರಿಗೆ ಚಾಕುವಿನಿಂದ ಕೊಲೆ ಮಾಡಿದ್ದಾನೆ ಎಂದು ಹಮೀದ ಹುಸೇನ ಕೊಣ್ಣೂರು ಎಂಬುವವರು ಅಮೀನಗಡ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
