ಲೀಲಾವತಿಯವರಿಗೆ ಕೆಲವು ದಿನಗಳಿಂದ ಅನಾರೋಗ್ಯ ಉಂಟಾಗಿದೆ, ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ಎಂಬ ವಿಷಯ ಚಿತ್ರರಂಗಕ್ಕೆ ಆತಂಕ ಉಂಟುಮಾಡ್ತು. ಆದರೆ ಈಗ ಸಮಾಧಾನಕರ ಅಪ್ಡೇಟ್ ಒಂದು ಬರ್ತಿಎದೆ. ಲೀಲಾವತಿಯವರ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆಯಾಗಿದೆ.
ಹಿರಿಯನಟಿ ಲೀಲಾವತಿ ವಹೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮುಂಚಿನಂತೆ ಲೀಲಾವತಿಗೆ ಎದ್ದುಓಡಾಡೋಕೆ ಸಾಧ್ಯವಾಗ್ತಿಲ್ಲ. ಹಾಸಿಗೆಯಲ್ಲೇ ಲೀಲಾವತಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ತಮ್ಮ ನಿವಾಸದಲ್ಲಿ ಲೀಲಾವತಿ ಅನಾರೋಗ್ಯದಿಂದ ಬಳಲುತ್ತಿರೋ ದೃಶ್ಯಗಳು ಒಮ್ಮೆ ಮನಸ್ಸಿಗೆ ಚುರುಕ್ ಎನಿಸಿದೇ ಇರದು. ಚಿತ್ರರಂಗದಲ್ಲಿ ದೈತ್ಯಪ್ರತಿಭೆಯಾಗಿ ಮೆರೆದ ಲೀಲಾವತಿಯವರಿಗೆ 87 ವರ್ಷವಾಗಿದೆ. ಹಾಸಿಗೆ ಹಿಡಿದಿರೋ ಲೀಲಾವತಿಯವರನ್ನ ನೋಡಿ ಆರೋಗ್ಯ ವಿಚಾರಿಸಿಕೊಂಡು ಹೋಗೊಕೆ ಚಿತ್ರರಂಗದಿಂದ ನಟನಟಿಯರು ಹಾಗೂ ಗಣ್ಯರು ಬರ್ತಾವನೆ ಇದ್ದಾರೆ. ಇಂದು ಡಾ.ಶಿವರಾಜ್ ಕುಮಾರ್ ಭೇಟಿ ಮತ್ತೆ ಲೀಲಾವತಿ ಕುಟುಂಬಕ್ಕೊಂದು ಶಕ್ತಿ,ಉತ್ಸಾಹ ಕೊಟ್ಟಿದೆ.
ಇಂದು ಶಿವಣ್ಣ ನೆಲಮಂಗಲದ ಸೋಲದೇವನಹಳ್ಳಿ ವಿನೋದ್ರಾಜ್ ನಿವಾಸಕ್ಕೆ ಭೇಟಿ ಕೊಟ್ರು. ವಿನೋದ್ರಾಜ್ರನ್ನ ನೋಡುತ್ತಿದ್ದಂತೆ ಪ್ರೀತಿಯಿಂದ ಹಗ್ ಮಾಡಿದ್ರು. ಲೀಲಾವತಿಯವರು ಮತ್ತೆ ಅನಾರೋಗ್ಯವನ್ನ ಗೆದ್ದು ಬರ್ತಾತರೆ ಎಂಬ ಆಶ್ವಾಸನೆ ತುಂಬಿದ್ರು. ಲೀಲಾವತಿಯವರನ್ನ ಶಿವಣ್ಣ ಭೇಟಿ ಮಾಡಿದ ಅಪರೂಪದ ಕ್ಷಣ ನಿಜಕ್ಕೂ ಎಲ್ರೂ ನೆನಪಿನಲ್ಲಿಟ್ಟುಕೊಳ್ಳುವಂತಾಯ್ತು. ಇಷ್ಟು ಇಳಿವಯಸ್ಸಿನಲ್ಲೂ ಲೀಲಾವತಿಯವರ ಹುಮ್ಮಸ್ಸು, ಜೀವನಶೈಲಿ ಮೆಚ್ಚಿಕೊಳ್ಳುವಂತದ್ದು ಎನ್ನುತ್ತಲೇ ಶಿವಣ್ಣ, ಲೀಲಾವತಿಯವರನ್ನ ಮಾತನಾಡಿಸಿದ್ರು. ಶಿವಣ್ಣನ ಧ್ವನಿಯನ್ನ ಲೀಲಾವತಿ ಗುರುತಿಸಿದ್ದು ವಾತ್ಸಲ್ಯದ ಇನ್ನೊಂದು ಸಂಕೇತವಾಗಿತ್ತು..!
ಲೀಲಾವತಿಯವರ ಆರೋಗ್ಯದ ಮಾಹಿತಿ ಪಡೆದ ಶಿವಣ್ಣ ನಂತ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಸುದ್ಧಿಗೋಷ್ಟಿಯಲ್ಲೂ ವಿನೋದ್ರಾಜ್ ಕೈ ಹಿಡಿದೇ ಮಾತನಾಡಿದ ಶಿವಣ್ಣ, ಚಿತ್ರರಂಗ ಒಂದು ತುಂಬು ಕುಟುಂಬ, ನಾವೆಲ್ರೂ ಒಂದೇ ಎಂಬ ಪ್ರೀತಿಯ ಸಂದೇಶ ಕೊಟ್ರು. ಲೀಲಾವತಿಯವರು ಯುಗಪುರುಷರಿದ್ದಂತೆ. ಚಿಕ್ಕವಯಸ್ಸಿನಿಂದನೂ ನನಗೆ ಇವರನ್ನ ಕಂಡ್ರೆ ತುಂಬಾ ಪ್ರೀತಿ,ಅಕ್ಕರೆಯಿದೆ. ಲೀಲಾವತಿ ಒಳ್ಳೆಮನಸ್ಸಿರೋರು, ದೇವರ ಆರ್ಶಿವಾದ ಇವರ ಮೇಲೆಇದ್ದೇಇರುತ್ತೆ. ಹಾಗಾಗಿ, ಮಗನಾಗಿ ವಿನೋದ್ರಾಜ್ ಧೈರ್ಯವಾಗಿರಬೇಕು. ಬೇರೆ ನಿರ್ಧಾರಗಳನ್ನ ತೆಗೋಬಾರದು, ನಾನು ನನ್ ಮಗಳ ಮದುವೆ ಕಾರ್ಡ್ ಕೊಡೋಕೆ ಬಂದಾಗ ಲೀಲಮ್ಮ ಚೆನ್ನಾಗೇ ಇದ್ರು. ಈ ಇಳಿವಯಸ್ಸಿನಲ್ಲೂ ತಾಳೋ ಶಕ್ತಿ ಇದೆ ಅಲ್ವಾ ಅಂತ ಶಿವಣ್ಣ ವಿನೋದ್ರಾಜ್ಗೆ ಸ್ಥೆರ್ಯ ತುಂಬಿದ್ರು.
ಇನ್ನೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಕೂಡ ಬಂದು ಲೀಲಮ್ಮ ಆರೋಗ್ಯ ವಿಚಾರಿಸಿದ್ರು. ಅಲ್ಲದೇ ಹೋದವಾರವಷ್ಟೇ ಲೀಲಾವತಿ ಹಾಗೂ ವಿನೋದ್ರಾಜ್ ಕೊಟ್ಟಿದ್ದ ಒಂದು ಮನವಿಪತ್ರಕ್ಕೂ ಸ್ಪಂದಿಸಿದ್ರು. ಲೀಲಾವತಿ ಕನಸಿನ ಕೂಸಾದ ಪಶುವೈದ್ಯಶಾಲೆಯ ಉದ್ಘಾಟನೆಯನ್ನೂ ಮಾಡಿಕೊಟ್ರು. ಲೀಲಾವತಿಯವರ ಪ್ರಾಣಿಪ್ರೀತಿ ಹಾಗೂ ಸಾಮಾಜಿಕ ಕಳಕಳಿಯನ್ನ ಕೊಂಡಾಡಿದ ಡಿ.ಕೆ.ಶಿವಕುಮಾರ್ ಲೀಲಾವತಿಯವರ ಕನಸಿನ ಪಶುವೈದ್ಯಶಾಲೆ ಎಷ್ಟು ಚೆನ್ನಾಗಿದೆ ಎಂಬುದನ್ನು ಹೇಳಿದ್ರು. ಕಲಾವಿದೆಯಾಗಿದ್ದುಕೊಂಡು ವ್ಯವಸಾಯದಲ್ಲೂ ಸೈ ಎನಿಸಿಕೊಂಡ ಲೀಲಾವತಿಯವರ ಈ ಸೇವೆಯನ್ನ ಅರಿತುಕೊಂಡೇ ನಾನು ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದೀನಿ. ಎಷ್ಟೇ ದುಡ್ಡಿದ್ರೂ ಇಂತಹ ಮನಸ್ಥಿತಿ ಯಾರಿಗೆ ಇರುತ್ತೆ ಹೇಳಿ ಅಂತ ಡಿ.ಕೆ.ಶಿ, ಲೀಲಾವತಿ ಸೇವಮನೋಭಾವನೆಯನ್ನ ಹೊಗಳಿದ್ರು.
ಅಂತೂ ತೀವ್ರ ಅನಾರೋಗ್ಯದಿಂದ ಬಳಲಿದ ಲೀಲಾವತಿಯವರ ಆರೋಗ್ಯ ನಿಧಾನವಾಗಿ ಸುಧಾರಿಸ್ತಿದೆ ಎಂಬುದೇ ಸದ್ಯದ ಖುಷಿ..! ಆರೋಗ್ಯ ಕ್ಷೀಣಿಸುತ್ತಿದ್ರೂ ಲೀಲಾವತಿ ಈಗಲೂ ಜನ,ಸಮಾಜ, ಪ್ರಾಣಿಪ್ರೀತಿಯ ಅರಿವಿಟ್ಟುಕೊಂಡಿದ್ದಾರೆ. ಲೀಲಾವತಿಯವರ ಕಲಾಸೇವೆಯ ಬಗ್ಗೆಯಂತೂ ಹೇಳ್ತಾ ಹೋದ್ರೆ ದಿನ ಸಾಕಾಗದು. ಶಿವಣ್ಣ ಹೇಳಿದಂತೆ ದೇವರ ಆರ್ಶಿವಾದದಿಂದ ಲೀಲಾವತಿ ಮತ್ತೆ ಗುಣಮುಖರಾಗಿ ಮೊದಲಿನಂತಾಗಲಿ ಎಂಬುದೇ ಚಿತ್ರರಂಗದ ಪ್ರಾರ್ಥನೆ..!