ಬೆಂಗಳೂರು:– 2024ರಿಂದ ರಾಜ್ಯ ಶಿಕ್ಷಣ ನೀತಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಪ್ರಯತ್ನ ಖಂಡನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜಕೀಯ ದುರುದ್ದೇಶಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆದು, 2024ರಿಂದ ರಾಜ್ಯ ಶಿಕ್ಷಣ ನೀತಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಪ್ರಯತ್ನ ಖಂಡನೀಯ
ಎನ್ಇಪಿ ನಾಗಪುರ ಶಿಕ್ಷಣ, ಉತ್ತರ ಭಾರತದ ಶಿಕ್ಷಣ ನೀತಿಯಲ್ಲ. ಕಾಂಗ್ರೆಸ್ನ ರಾಜಕೀಯ ಪ್ರೇರಿತ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂದರು.
ಪಠ್ಯಕ್ರಮ ಮತ್ತು ಶಿಕ್ಷಣ ನೀತಿ ಪ್ರತ್ಯೇಕ. ಇದರ ಪರಿಜ್ಞಾನ ಇಲ್ಲಿನ ಸಿಎಂ, ಶಿಕ್ಷಣ ಸಚಿವರಿಗೆ ಇದೆಯೇ? ಕಲಿಯುವಿಕೆ ಮತ್ತು ಕಲಿಸುವುದು ಇದು ರಾಷ್ಟ್ರೀಯ ಶಿಕ್ಷಣ ನೀತಿ ಎಂದರು.
ಹಳೆಯ ನೀತಿಯಲ್ಲಿ ಇದ್ದ ನ್ಯೂನತೆಗಳನ್ನು ಹೋಗಲಾಡಿಸಿ 34 ವರ್ಷಗಳ ಬಳಿಕ ಹೊಸ ನೀತಿ ತರಲಾಗಿದೆ. ಸಮಾನತೆ, ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇದಕ್ಕಾಗಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗಿದೆ.
ರಾಜ್ಯ ಶಿಕ್ಷಣ ನೀತಿಯ ಕಚೇರಿ ಎಲ್ಲಿದೆ? ಈ ಸರ್ಕಾರ ರಚಿಸಿದ ಸಮಿತಿಯಲ್ಲಿ ಇರುವವರು ಯಾರು? ಅಧ್ಯಕ್ಷರು ಯಾವ ಊರಿನವರು? ರಾಜ್ಯ ಸಮಿತಿಯಲ್ಲಿ ಇಲ್ಲಿನವರು ಎಷ್ಟು ಜನ? ಹೊರ ರಾಜ್ಯದವರು ಎಷ್ಟು ಜನ ಎಂದು ಪ್ರಶ್ನಿಸಿದರು.
30 ಸಾವಿರ ಕೋಟಿ ರೂ ಪದವಿ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತಿದೆ. ವಿಶ್ವದರ್ಜೆಯ ಶಿಕ್ಷಣ ಕೊಡಲು ಒಂದು ಸರಕಾರಿ ಸಂಸ್ಥೆ ಇದೆಯೇ? 21ನೇ ಶತಮಾನ ಜ್ಞಾನದ ಶತಮಾನ. ಸರಸ್ವತಿ ಎಲ್ಲಿದೆಯೋ ಲಕ್ಷ್ಮಿ ಅಲ್ಲಿರುತ್ತಾಳೆ. ಬಡತನ, ತಾರತಮ್ಯ ಇಲ್ಲದೆ ಉತ್ತಮ ಕನಸು ನನಸಾಗಿಸಲು ಗುಣಮಟ್ಟದ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ ಅನಿವಾರ್ಯ ಎಂದರು.