ಇಸ್ಲಾಮಾಬಾದ್: ಭಾರತಕ್ಕೆ (India) ಬೇಕಾಗಿದ್ದ ಮೋಸ್ಟ್ ವಾಟೆಂಡ್ ಉಗ್ರ ಪಾಕಿಸ್ತಾನದ (Pakistan) ಕರಾಚಿಯಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ.
ನಿಷೇಧಿತ ಲಷ್ಕರ್-ಇ-ತೊಯ್ಬಾ (Lashkar-e-Taiba) ಸಂಘಟನೆಯ ಸ್ಥಾಪಕ ಸದಸ್ಯ ಉಗ್ರ ಖೈಸರ್ ಫಾರೂಕ್ (Qaiser Farooq) ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ.

ಕರಾಚಿಯ ಬೀದಿಯಲ್ಲಿ ಇತರ ವ್ಯಕ್ತಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಫಾರೂಕ್ ಮೇಲೆ ದಾಳಿ ನಡೆದಿದೆ. ಈತ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನ (Hafiz Saeed) ಆಪ್ತ ಸಹಾಯಕನಾಗಿದ್ದ.
ಮಂಗಳವಾರ ಹಫೀಜ್ ಸಯೀದ್ ಪುತ್ರ ಕಮಾಲುದ್ದೀನ್ ಸಯೀದ್ನನ್ನು ಅಪಹರಣ ಮಾಡಲಾಗಿತ್ತು. ಪೇಶಾವರದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಮಾಲುದ್ದೀನ್ ಸಯೀದ್ನನ್ನು ಅಪಹರಣ ಮಾಡಿದ್ದರು. ಇಲ್ಲಿಯವರೆಗೆ ಕಮಾಲುದ್ದೀನ್ ಸಯೀದ್ ಎಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎಂಬ ವಿಚಾರ ಚರ್ಚೆ ಆಗುತ್ತಿದೆ.

