ಹುಬ್ಬಳ್ಳಿ:– ಮನೆ ಮುಂದೆ ನಿಲ್ಲಿಸಿದ ಆಟವನ್ನು ಯಾರೋ ದುಷ್ಕರ್ಮಿಗಳು ಮಧ್ಯ ರಾತ್ರಿ ಸುಟ್ಟು ಹೋದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು,,, ನೇಕಾರ ನಗರದ ಮಹಾ ಲಕ್ಷ್ಮೀ ಕಾಲೋನಿಯಲ್ಲಿ ವೀರಣಗೌಡ ಪಾಟೀಲ್ ಎಂಬುವವರಿಗೆ ಸೇರಿದ ಆಟೋ ಇದಾಗಿದ್ದು, ಹಗಲೆಲ್ಲ ದುಡಿದು ರಾತ್ರಿವೇಳೆ ಯತಾ ಸ್ಥಿತಿ ಮನೆ ಮುಂದೆ ನಿಲ್ಲಿಸಿದ್ದರು. ಮಧ್ಯ ರಾತ್ರಿ 1:30 ಕ್ಕೆ ಯಾರೋ ದುಷ್ಕರ್ಮಿಗಳು ಆಟೋವನ್ನೆ ಸುಟ್ಟು ಹೋಗಿದ್ದಾರೆ. ಆಟೋಗೆ ಬೆಂಕಿ ಹತ್ತಿದ್ದನ್ನು ನೋಡಿದ ಅಕ್ಕ ಪಕ್ಕದವರು ಮಾಲೀಕನನ್ನು ಎಬ್ಬಿಸಿ ಬೆಂಕಿ ನಿಂದಿಸಿದ್ದಾರೆ. ಅಷ್ಟರಲ್ಲೆ ಆಟೋ ಸುಟ್ಟು ಕರಕಲಾಗಿದೆ. ಈಗ ಆ ಕುಟುಂಬ ಕಣ್ಣೀರು ಹಾಕುತ್ತಿದೆ. ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.