ತಮಿಳು ನಟ ಕಮ್ ರಾಜಕಾರಣಿ ದಳಪತಿ ವಿಜಯ್ ಅವರ ಐಷಾರಾಮಿ ನಿವಾಸದ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ. ಚಪ್ಪಲಿ ಎಸೆದು ಓಡುವಾಗ ಭದ್ರತಾ ಸಿಬ್ಬಂದಿ ಹಿಡಿದು ವಿಚಾರಣೆ ನಡೆಸಿದ್ದಾರೆ. ಚೆನ್ನೈ ನಗರದ ನೀಲಂಕರೈನಲ್ಲಿ ಇರುವ ವಿಜಯ್ ಅವರ ನಿವಾಸದ ಮೇಲೆ ವ್ಯಕ್ತಿ ಚಪ್ಪಲಿ ಎಸೆದಿದ್ದಾನೆ.
ಸದ್ಯ ವಿಜಯ್ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎನ್ನುವ ಪಕ್ಷ ಸ್ಥಾಪನೆ ಮಾಡಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಟಿವಿಕೆ ಪಕ್ಷದ ಮೊದಲ ವರ್ಷದ ಸಂಭ್ರಮಾಚರಣೆಯಲ್ಲಿ ವಿಜಯ್ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ಮಾಡುತ್ತಿದ್ದರು. ಆಗ ವ್ಯಕ್ತಿಯೊಬ್ಬ ವಿಜಯ್ ನಿವಾಸದ ಮೇಲೆ ಮಕ್ಕಳ ಚಪ್ಪಲಿ ಎಸೆದಿದ್ದಾನೆ ಎಂದು ಹೇಳಲಾಗಿದೆ.
ನಿವಾಸದ ಮೇಲೆ ಚಪ್ಪಲಿ ಎಸೆದವನೇ ವ್ಯಕ್ತಿ ಒಂದೇ ವೇಗದಲ್ಲಿ ಓಡುತ್ತಿದ್ದನು. ತಕ್ಷಣ ಜಾಗೃತರಾದ ಸೆಕ್ಯೂರಿಟಿ ಸಿಬ್ಬಂದಿ ಓಡಿ ಹೋಗಿ ವ್ಯಕ್ತಿಯನ್ನು ಹಿಡಿದು ತಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆ ವ್ಯಕ್ತಿ ಬುದ್ಧಿಮಾಂದ್ಯ ಎನ್ನುವುದು ತಿಳಿದು ಬಂದಿದೆ. ಹೀಗಾಗಿ ವ್ಯಕ್ತಿಯನ್ನು ಬಿಟ್ಟು ಕಳಿಸಿದ್ದಾರೆ. ಆದರೆ ಈ ಕುರಿತು ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಾರ್ಯಕ್ರಮದಲ್ಲಿ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಅವರು, ತಮಿಳುನಾಡಿದನ ಆಡಳಿತ ಪಕ್ಷ ಡಿಎಂಕೆ, ಕೇಂದ್ರದ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಹಿಂದಿ ಭಾಷೆಯನ್ನ ನಮ್ಮ ಮೇಲೆ ಏರಲು ಎರಡು ಪಕ್ಷಗಳು ವೇದಿಕೆಯ ಮೇಲೆ ಡ್ರಾಮಾ ಮಾಡುತ್ತಿವೆ. ಎಲ್ಕೆಜಿ- ಯುಕೆಜಿ ಮಕ್ಕಳ ರೀತಿ ಡಿಎಂಕೆ, ಬಿಜೆಪಿ ವರ್ತಿಸುತ್ತಿವೆ ಎಂದು ಹೇಳಿದ್ದರು. ಇದು ಹೇಳಿದ ಬೆನ್ನಲ್ಲೇ ಅವರ ಮನೆ ಮೇಲೆ ಮಕ್ಕಳ ಚಪ್ಪಲಿ ಎಸೆದಿರುವುದು ಗೊತ್ತಾಗಿದೆ.