ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗೋಕೆ ಜನರು ಅಪಾಯಕಾರಿ ಸಾಹಸಕ್ಕೆ ಕೈ ಹಾಕ್ತಿದ್ದಾರೆ. ಹಾವನ್ನು ಕೈನಲ್ಲಿ ಹಿಡಿದು ಅನೇಕರು ಸಾಹಸ ಮಾಡ್ತಿದ್ದಾರೆ. ಮತ್ತೆ ಕೆಲವರು ನಿಜವಾಗ್ಲೂ ಹಾವು ಹಾಗೂ ಜನಸಾಮಾನ್ಯರ ನೆರವಿಗೆ ಬರ್ತಿದ್ದಾರೆ. ಹಾವು ಹಿಡಿಯುವ, ಹಾವುಗಳನ್ನು ರಕ್ಷಿಸುವ ಅನೇಕ ಕಾರ್ಯಕರ್ತರನ್ನು ನಾವು ಕಾಣ್ಬಹುದು.
ಈಗ ಸಾಮಾಜಿಕ ಜಾಲತಾಣದಲ್ಲಿ ಬಾಯಾರಿದ ಕಿಂಗ್ ಕೋಬ್ರಾ (King Cobra ) ಗೆ ವ್ಯಕ್ತಿಯೊಬ್ಬರು ಸಹಾಯ ಮಾಡಿದ ವಿಡಿಯೋ (Video) ವೈರಲ್ ಆಗಿದೆ. ಸಾಕು ಪ್ರಾಣಿಗಳಿಗೆ ನಾವು ನೀರುಣಿಸ್ತೇವೆ. ಹಾಗಂತ ಕಿಂಗ್ ಕೋಬ್ರಾಗೆ ನೀರು ಕೊಡಿ ಅಂದ್ರೆ ನಮ್ಮ ಹತ್ತಿರ ಸಾಧ್ಯವಿಲ್ಲ. ಆದ್ರೆ ಕಿಂಗ್ ಕೋಬ್ರಾಗೆ ಬಾಟಲಿಯಲ್ಲಿ ನೀರು ಕುಡಿಸುವ ಸಾಹಸವನ್ನು ವ್ಯಕ್ತಿಯೊಬ್ಬರು ಮಾಡಿದ್ದಾರೆ. ತಮಿಳುನಾಡಿನ ಕಡಲೂರು ಜಿಲ್ಲೆಯ ವನ್ಯಜೀವಿ ಕಾರ್ಯಕರ್ತರೊಬ್ಬರು ಈ ಸಾಹಸ ಮಾಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

