ಬಳ್ಳಾರಿ: ಬೈಕ್ನಿಂದ ಬಿದ್ದ ಮಹಿಳೆ ಮೇಲೆ ಸಿಲಿಂಡರ್ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಸಿರುಗುಪ್ಪ ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದ ನಿವಾಸಿ ನಿಂಗಮ್ಮ (52) ಮೃತ ದುರ್ದೈವಿಯಾಗಿದ್ದು,.
ಸಿರುಗುಪ್ಪಗೆ ತಾಲೂಕು ಕಚೇರಿಗೆ ದಂಪತಿ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿ ಕುಳಿತಿದ್ದ ನಿಂಗಮ್ಮ ಬೈಕ್ನಿಂದ ಆಯತಪ್ಪಿ ಬಿದ್ದಿದ್ದಾರೆ. ಇದೇ ವೇಳೆ ಪಕ್ಕದಲ್ಲಿ ಬರುತ್ತಿದ್ದ ಸಿಲಿಂಡರ್ ಲಾರಿ ನಿಂಗಮ್ಮಳ ತಲೆ ಮೇಲೆ ಹರಿದಿದೆ. ಲಾರಿ ಹರಿದ ಪರಿಣಾಮ ತಲೆ ಪೂರ್ತಿ ನಜ್ಜುಗುಜ್ಜಾಗಿತ್ತು.
Most Visited Websites: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್ಗಳು ಯಾವುದು ಗೊತ್ತಾ?
ನಿಂಗಮ್ಮಳ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಕಣ್ಮುಂದೆ ಪತ್ನಿ ಸಾವನ್ನು ಕಂಡು ಅಘಾತಕ್ಕೊಳಗಾಗಿದ್ದರು. ಸ್ಥಳಕ್ಕೆ ಸಿರುಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.