ಬೆಂಗಳೂರು :- ಬಿಜೆಪಿ ಅಂತರಿಕ ಭಿನ್ನಮತ ವಿಚಾರವಾಗಿ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪರಸ್ತ್ರೀ ಹಿಂದೆ ಬಿದ್ದ ಪತಿ.. ಸುಫಾರಿ ಕೊಟ್ಟು ಕಾಲು ಮುರಿಸಿದ ಪತ್ನಿ ..!? ; ಪೊಲೀಸರ ವಶಕ್ಕೆ
ಈ ಸಂಬಂಧ ಮಾತನಾಡಿದ ಅವರು, ಕೆಲವು ದಿನಗಳಿಂದ ಹಿರಿಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದು ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸುತ್ತಿರುವ ಕಾರ್ಯಕರ್ತರ ಭಾವನೆಗೆ ಘಾಸಿ ಉಂಟು ಮಾಡುತ್ತದೆ.
ಜವಾಬ್ದಾರಿಯುತ ವಿಪಕ್ಷವಾಗಿ ಪ್ರಸಕ್ತ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಬಯಲು ಮಾಡಬೇಕಿದೆ. ಪಕ್ಷದ ಸಂಘಟನೆಯೊಳಗೆ ಒಂದು ವ್ಯವಸ್ಥೆ ಇದೆ. ಈಗ ಪಕ್ಷದಲ್ಲಿ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಲ್ಲವನ್ನೂ ಒಮ್ಮತದಿಂದ ಬಗೆ ಹರಿಸಲು ಪಕ್ಷದ ನಾಯಕತ್ವ ಶಕ್ತವಾಗಿದೆ. ಪಕ್ಷದ ಮಾರ್ಗಸೂಚಿಯಂತೆ ಎಲ್ಲರೂ ನಡೆದುಕೊಳ್ಳಬೇಕು. ಯಾರೂ ಪಕ್ಷದ ಶಿಸ್ತು ಯಾರೂ ಉಲ್ಲಂಘಿಸಬಾರದು. ಪಕ್ಷದ ಹಿತದೃಷ್ಟಿಯಿಂದ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರಿದ್ದಾರೆ.
ಶಾಂತಿ, ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದರು.