ಬೆಂಗಳೂರು: ಎಲ್ಲೆಡೆ ನೀರಿನ ಅಭಾವ ಶುರುವಾಗಿದೆ. ಅಪಾರ್ಟ್ಮೆಂಟ್, ಬೀದಿ ಬೀದಿಗಳಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಈ ಮಧ್ಯೆ ಸರ್ಕಾರಿ ಆಸ್ಪತ್ರೆಗಳು ಕೂಡ ನೀರಿಲ್ಲದೇ ಪರದಾಟ ನಡೆಸೋ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಿದ್ರೆ ನೀರಿನ ಸಮಸ್ಯೆ ಆಸ್ಪತ್ರೆಗಳನ್ನು ಎಷ್ಟರ ಮಟ್ಟಿಗೆ ಕಾಡುತ್ತಿದೆ ಅನ್ನೋದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ..
ಬೆಂಗಳೂರಿನ ಪ್ರತಿ ಏರಿಯಾ, ಮನೆ ಮನೆಗಳಲ್ಲೂ ನೀರಿನ ಅಭಾವ ತಾಂಡವವಾಡುತ್ತಿದೆ. ಈ ಮಧ್ಯೆ ಸಕಲ ಸೌಕರ್ಯಗಳೊಂದಿಗೆ ಜೀವ ಉಳಿಸಲು ಸಜ್ಜಾಗಿರುವ ಸರ್ಕಾರಿ ಆಸ್ಪತ್ರೆಗಳೂ ಕೂಡ ನೀರಿಲ್ಲದೇ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ಹೌದು ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ಸರ್ ಸಿ ವಿ ರಾಮನ್ ಆಸ್ಪತ್ರೆಯಲ್ಲಿ ನಿಧಾನವಾಗಿ ನೀರಿನ ಅಭಾವ ಶುರುವಾಗಿದೆ. ಹನಿಹನಿ ಉಳಿಸುವ ಪ್ರಯತ್ನ ಆಸ್ಪತ್ರೆ ಸಿಬ್ಬಂದಿಯಿಂದ ನಡೆಯುತ್ತಿದೆ.
ಹೌದು… ಸರ್ ಸಿ ವಿ ರಾಮನ್ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಕಂಡು ಬಂದಿರಲಿಲ್ಲಾ, ಆದ್ರೆ ಈ ವರ್ಷ ಮಾತ್ರ ಎಲ್ಲೆಡೆ ನೀರಿನ ಅಭಾವ ಉಂಟಾಗಿದ್ದು, ಇದಕ್ಕೆ ಸಿ.ವಿ. ರಾಮನ್ ಆಸ್ಪತ್ರೆ ಏನು ಹೊರತಾಗಿಲ್ಲ. ದಿನ ನಿತ್ಯ ಸಾವಿರಾರು ರೋಗಿಗಳು ಬರೋ ಆಸ್ಪತ್ರೆಯ ನೀರಿನ ಮೂಲಗಳು ಕೈ ಕೊಟ್ಟಿದೆ. ಆಸ್ಪತ್ರೆಯ ಒಳಗೆ ನಾಲ್ಕು ಬೋರ್ ವೆಲ್ ವ್ಯವಸ್ಥೆ ಮಾಡಲಾಗಿತ್ತು ಆದ್ರೆ ಅದರಲ್ಲಿ ಮೂರು ಬೋರ್ ವೆಲ್ ಗಳು ಕೆಟ್ಟು ಹೋಗಿದ್ದು ಒಂದೇ ಬೋರ್ ವೆಲ್ನಲ್ಲಿ ಎರಡು ವರೆ ಇಂಚು ನೀರಿದ್ದು ಅದರಿಂದಲೇ ಆಸ್ಪತ್ರೆ ಎಲ್ಲಾ ಅವಶ್ಯಕತೆಗಳಿಗೂ ತಕ್ಕಂತೆ ನೀರನ್ನು ಬಳಸಲಾಗುತ್ತಿದೆ.
ಇನ್ನೂ…ಡಯಾಲಿಸಿಸ್, ಆಸ್ಪತ್ರೆ ಸ್ವಚ್ಚತೆ ಸೇರಿದಂತೆ ಅನೇಕ ಕೆಲಸಗಳಿಗೆ ನೀರಿನ ಅವಶ್ಯಕತೆ ಇದೆ. ಆದ್ರೆ ಸದ್ಯ ಆಸ್ಪತ್ರೆ ಪೂರೈಕೆಯಾಗುತ್ತಿರುವ ನೀರು ಸಾಲುತ್ತಿಲ್ಲಾ ಹೀಗಾಗಿ ಈಗಾಗಲೇ ಸಿ ವಿ ರಾಮನ್ ಆಸ್ಪತ್ರೆ ಸಿಬ್ಬಂದಿ ಉಳಿದ ಬೋರ್ವೆಲ್ಗಳನ್ನು ರೀಪೇರಿ ಮಾಡಿಕೊಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಒಂದು ಬ
ವೇಳೆ ಆ ಬೋರ್ವೆಲ್ಗಳು ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಿಂದ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವಂತಾಗುತ್ತದೆ. ಒಟ್ನಲ್ಲಿ ಸರ್ಕಾರಿ ಆಸ್ಪತ್ರೆಗಳು ಕೂಡ ನೀರಿನ ಅಭಾವದಿಂದಾಗಿ ನಲುಗಿ ಹೋಗಿದೆ. ಒಂದೆಡೆ ಸಮಸ್ಯೆಗಳನ್ನು ಎದುರಿಸುತ್ತಾ ರೋಗಿಗಳಿಗೆ ಸರ್ ಸಿ ವಿ ರಾಮನ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು. ಶೀಘ್ರದಲ್ಲಿ ವರುಣ ಕರುಣೆ ತೋರ್ಲಿ ಅಂತಾ ವೈದ್ಯರು ಬೇಡಿಕೊಳ್ಳುತ್ತಿರೊದಂತು ನಿಜ