ಬೆಂಗಳೂರು:- ಕಾಂಗ್ರೆಸ್ ನ ಉಚಿತ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಉಚಿತ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಎಲ್ಲ ಹಣ ಪಂಚರಾಜ್ಯ ಚುನಾವಣೆಗೆ ಹೋಗುತ್ತಿದೆ. ಕಾಂಗ್ರೆಸ್ ನಾಯಕರು ಗೃಹ ಸಚಿವ ಡಾ. ಜಿ ಪರಮೇಶ್ವರ (G.parameshwar) ಮನೆಯಲ್ಲಿ ಯಾಕೆ ಸಭೆ ಮಾಡಿದರು? ಪಕ್ಕದ ಮನೆಯಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ದೂರ ಇಟ್ಟು ಸಭೆ ಮಾಡಿದ್ದೇಕೆ? ಎಂದು ಪ್ರಶ್ನಿಸಿದರು. ಅವರ ಸರ್ಕಾರವನ್ನು ಕೆಡವಲು ನಾವ್ಯಾರು? ಹಿಂದೆ ಅವರ ಸರ್ಕಾರ ಹೇಗೆ ಬಿದ್ದು ಹೋಯಿತು ಎಂದು ಅವರಿಗೆ ಗೊತ್ತಿದೆ. ಅವರ ನಡುವಿನ ಕಿತ್ತಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಶಾಸಕರಿಗೆ ಅನುದಾನ ನೀಡುತ್ತಿಲ್ಲ, ಹೀಗಾಗಿ ಅವರು ಜನರ ಬಳಿ ಹೋಗುತ್ತಿಲ್ಲ. ಉಚಿತ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಎಲ್ಲ ಹಣ ಪಂಚರಾಜ್ಯ ಚುನಾವಣೆಗೆ ಹೋಗುತ್ತಿದೆ. ಕಾವೇರಿ ಹೊರಾಟದಲ್ಲಿ ಜನರಿಗೆ ಮಾಡಿದ ಮೋಸ, ಬರಗಾಲದಲ್ಲಿ ಮಂತ್ರಿಗಳು ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಟೀಮ್ ಮಾಡಿಕೊಂಡು ಸಭೆ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, 60% ಪರ್ಸೆಂಟ್ ಸರ್ಕಾರ ಎಂದು ಜನರು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

