ಬೆಂಗಳೂರು: ಅವರೆಲ್ಲಾ ಪ್ರತಿನಿತ್ಯ ನೂರಾರು ಮಂದಿಗೆ ಪ್ರಾಣ ಉಳಿಸುತ್ತಿದ್ದ ಸಿಬ್ಬಂದಿ. ಆದ್ರೆ ಇವರಿಗೆಲ್ಲಾ ಸರ್ಕಾರ ಕಳೆದ ಎರಡು ವರ್ಷಗಳಿಂದ ಅರ್ಧ ಸಂಬಳ ನೀಡ್ತಿದೆ.ಇದು ಕನಿಷ್ಠ ಜೀವನಕ್ಕೂ ಸಾಕಾಗ್ತಿಲ್ಲ. ತಮ್ಮ ಕಷ್ಟಕ್ಕೆ ಸ್ವಂದಿಸುವಂತೆ ಆರೋಗ್ಯ ಸಚಿವರನ್ನ ಭೇಟಿ ಮಾಡಿದ್ರೂ ಕೇರ್ ಮಾಡ್ತಿಲ್ಲ. ಹೀಗಾಗಿ ಸರ್ಕಾರದ ಧೋರಣೆ ವಿರುದ್ದ ಸಿಡಿದೆದ್ದಿರೋ ಸಿಬ್ಬಂದಿ ಇವತ್ತು ರಾಜ್ಯ ರಾಜ್ಯಧಾನಿ ಬೆಂಗಳೂರಿಗೆ ಲಗ್ಗೆ ಇಟ್ಟಿದ್ದಾರೆ. ಸಂಬಳ ನೀಡೋವರಿಗೂ ನಾವು ಫ್ರೀಡಂ ಪಾರ್ಕ್ ಬಿಟ್ಟು ತೆರಳಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ಈ ದುಬಾರಿ ದುನಿಯಾದಲ್ಲಿ ಸಂಬಳ ಬಂದ್ರೂ ಜೀವನ ಮಾಡೋಕೆ ಕಷ್ಟ. ಇನ್ನೂ ದುಡಿಮೆ ಮಾಡಿದ್ರೂ ಸಂಬಳ ಬಂದಿಲ್ಲ ಅಂದ್ರೆ ಬದುಕುವದಕ್ಕೇ ಆಗಲ್ಲ ಬಿಡಿ. ಆದ್ರೆ ಸರ್ಕಾರ ಡಯಲಿಸಿಸ್ ಸಿಬ್ಬಂದಿ ಕಳೆದ ಎರಡು ವರ್ಷದಿಂದ ಅರ್ಧಷ್ಟು ಸಂಬಳ ನೀಡ್ತಿದೆ. ಜೊತೆಗೆ ಕಳೆದ ಎರಡೂವರೆ ತಿಂಗಳಿಂದ ಸಂಬಳನ್ನೂ ವಿತರಣೆ ಮಾಡಿಲ್ವಾಂತೆ ಇದ್ರರಿಂದ ಸರ್ಕಾರದ ವಿರುದ್ದ ಸಿಟ್ಟಾಗಿರೋ ನೂರಾರು ಡಯಾಲಿಸಿಸ್ ಸಿಬ್ಬಂದಿ ಮುಷ್ಕರದ ಅಸ್ತ್ರ ಪ್ರಯೋಗಿಸಿದ್ದಾರೆ.ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಧರಣಿ ಶುರು ಮಾಡಿದ್ದಾರೆ.
ಹೌದು.. ಸರ್ಕಾರ ಕೊರೊನಾ ಕಾರಣ ಹೇಳಿ ಡಯಾಲಿಸಿಸ್ ಸಿಬ್ಬಂದಿ ಸಂಬಳಕ್ಕೆ ಕತ್ತರಿ ಹಾಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡುವರೆ ವರ್ಷಗಳಿಂದ ಸಿಬ್ಬಂದಿ ಅರ್ಧ ಸಂಬಳ ಪಡೆದು ಕೆಲಸ ಮಾಡುತ್ತಿದ್ದಾರೆ. ಇದು ಕನಿಷ್ಠ ಜೀವನಕ್ಕೂ ಸಾಲುತ್ತಿಲ್ಲ.ಅಲ್ಲದೇ ಕಳೆದ ಎರಡುವರೆ ತಿಂಗಳ ವೇತನ ಕೂಡ ಹೋಲ್ಡ್ ಮಾಡಲಾಗಿದ್ದು, ಅರ್ಧ ಸಂಬಳ ಕೂಡ ಸಿಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಈ ಹಿಂದೆ ಡಯಾಲಿಸಿಸ್ ಕೇಂದ್ರ ನಿರ್ವಹಣೆ ಮಾಡುತ್ತಿದ್ದ ಬಿಆರ್ಎಸ್ ಸಂಸ್ಥೆ 2021ರಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಆಗದ ಕಾರಣ ನಿರ್ವಹಣೆಯಿಂದ ಹಿಂದೆ ಸರಿಯಿತು. ನಂತರದಲ್ಲಿ ಯಾವುದೇ ಟೆಂಡರ್ ಆಗದೇ ಕೋಲ್ಕತ್ತ ಮೂಲದ ESKAG ಸಂಜೀವಿನಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ.ಈ ಹಿಂದೆ 45 ಕೇಂದ್ರಗಳ ಜವಬ್ದಾರಿ ಹೊತ್ತಿದ್ದ ESKAG ಸಂಜೀವಿನಿಗೆ ಈಗ 202 ಕೇಂದ್ರಗಳ ಜವಾಬ್ದಾರಿ ನೀಡಲಾಗಿದೆ. ಈ ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 650 ಸಿಬ್ಬಂದಿಗಳ ಸಂಬಳದ ಬಗ್ಗೆ ಸರ್ಕಾರ ಅಸಡ್ಡೆ ತೋರಿದೆ. ವೇತನ ಸಿಗದೇ, ಪಿಎಫ್, ಇಎಸ್ಐ ಇಲ್ಲದೇ 650 ಸಿಬ್ಬಂದಿಗಳು ಪರದಾಡುತ್ತಿದ್ದಾರೆ.
ಇನ್ನೂ ತಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಮೂರು ಬಾರಿ ಭೇಟಿ ಮಾಡಿದರೂ ಸ್ಪಂದಿಸಿಲ್ಲ. ರಾಜ್ಯದಲ್ಲಿ ಒಟ್ಟು 202 ಡಯಾಲಿಸಿಸ್ ಕೇಂದ್ರಗಳಿವೆ. ಈ ಪೈಕಿ ಬೆಂಗಳೂರು, ತುಮಕೂರು, ರಾಮನಗರ, ಗದಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ಸೆಂಟರ್ಗಳಿವೆ. ಇಲ್ಲಿ ಗ್ರೂಪ್ ಡಿ, ಸ್ಟಾಫ್, ಡಯಾಲಿಸಿಸ್ ಟೆಕ್ನಿಶಿಯನ್ಸ್ ಸೇರಿ ಒಟ್ಟು 650 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 2500 ಜನರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ.ಇದ್ರೆ ಸರ್ಕಾರ ಇವರಿಗೆ ವೇತನ ನೀಡ್ತಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕು. ಇಲ್ಲದ್ರೆ ಬೆಂಗಳೂರಿನಲ್ಲೇ ಧರಣಿ ಮುಂದುವರಿಸ್ತೇವೆ ಅಂತ ಎಚ್ಚರಿಸಿದ್ದಾರೆ
ಒಟ್ಟಿನಲ್ಲಿ ಜನರ ಜೀವ ಉಳಿಸೋ ಆರೋಗ್ಯ ರಕ್ಷಕರಿಗೆ ಸರ್ಕಾರ ವೇತನ ನೀಡ್ತಿಲ್ಲ. ಜೊತೆಗೆ ಪಿಎಫ್ ಮತ್ತು ಇಎಸ್ಐ ಕೊಡುಗೆಗಳನ್ನು ಸಹ ಏಜೆನ್ಸಿಗಳು ಪಾವತಿಸುತ್ತಿಲ್ಲ, ಅಂತ ಡಯಾಲಿಸಿಸ್ ಸಿಬ್ಬಂದಿ ಆರೋಪ ಮಾಡ್ತಿದ್ದಾರೆ. ಸರ್ಕಾರ ಒಂದು ವೇಳೆ ಇದೇ ರೀತಿಯಲ್ಲಿ ಮೊಂಟುತನ ಮಾಡ್ತಾ ವೇತನ ಪಾವತಿಸೋದು ವಿಳಂಬ ಮಾಡಿದ್ರೆ ಡಯಾಲಿಸಿಸ್ ರೋಗಿಗಳ ಆಪತ್ತು ಬರಲಿದೆ. ಆದ್ರೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ