ಬಳ್ಳಾರಿ: ಯಂಗ್ ಟೈಗರ್ NTR ಅಭಿನಯದ ದೇವರ ಚಲನಚಿತ್ರವು ಶುಕ್ರವಾರ ಮುಂಜಾನೆ ಪ್ರದರ್ಶನ ಹಿನ್ನೆಲೆ ಯಲ್ಲಿ ಸಾವಿರಾರು ಅಭಿಮಾನಿಗಳು ಸಂಜೆ ಇಂದಲೇ ಥಿಯೇಟರ್ ಬಳಿ ಜಮಾಯಿಸಿದರು. ಮಧ್ಯರಾತ್ರಿ 1 ಗಂಟೆಗೆ ಚಲನಚಿತ್ರ ಪ್ರದರ್ಶನ ಕಾಣುವ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆಗೆ ಗೇಟ್ ತೆರೆಯಲು ತಡಮಾಡುತ್ತಿದ್ದಾರೆ ಎಂದು.
Ghee Test: ನೀವು ಖರೀದಿಸುವ ತುಪ್ಪ ಅಸಲಿಯೋ, ನಕಲಿಯೋ..? ಹೀಗೆ ಪರೀಕ್ಷಿಸಿ ನೋಡಿ
ಎಲ್ಲಾ ಅಭಿಮಾನಿಗಳು ಆಕ್ರೋಶಗೊಂಡು ಒಂದೇ ಸಮನೆ ಅಲುಗಾಡಿಸಿ ಗೇಟ್ ಮುರಿದು ಚಲನಚಿತ್ರ ನೋಡಲು ಚಿತ್ರಮಂದಿರದ ಒಳಗಡೆ ಓಡಿದರು. ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಚಿತ್ರಮಂದಿರ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಇನ್ನೂ ಚಿತ್ರಮಂದಿರದ ಮುರಿದ ಗೇಟನ್ನು ರಾತ್ರೋರಾತ್ರಿ ಚಿತ್ರಮಂದಿರದ ಸಿಬ್ಬಂದಿ ರೆಡಿಮಾಡಿಸಿದರು.