ಹಾವೇರಿ: ಕೃಷಿ ಪ್ರಧಾನವಾದ ಜಿಲ್ಲೆಯ ರೈತರ ಬೆಳೆಗೆ ಜೀವ ನೀಡುವ ಹಿನ್ನೆಲೆ ಹಾವೇರಿ ಜಿಲ್ಲೆ ಶಾಸಕರು ಮೋಡ ಬಿತ್ತನೆ ಮಾಡಿದ್ರು. ಆದರೂ, ಏಲಕ್ಕಿ ನಾಡಿನಲ್ಲಿ ರೈತರ ಗೋಳು ಹೇಳತೀರದಾಗಿದೆ. ಬೆಳೆದ ಬೆಳೆಯನ್ನ ಸ್ವತಃ ರೈತನೇ ನಾಶ ಮಾಡಲು ಮುಂದಾಗಿದ್ದಾನೆ.

ಹಾವೇರಿ ಜಿಲ್ಲೆಯಾದ್ಯಂತ ಬೆಳೆ ನಾಶದ ಪರ್ವ ಆರಂಭವಾಗಿದೆ. ಮುಂಗಾರು ಮಳೆ ತಡವಾಗಿ ಬಂದು ರೈತರ ಬಾಳಿನಲ್ಲಿ ಕತ್ತಲೆ ಆವರಿಸುವಂತೆ ಮಾಡಿದೆ. ಹಾವೇರಿ ಜಿಲ್ಲೆಯ ಬಹುತೇಕ ತಾಲೂಕಿನ ಗ್ರಾಮದ ರೈತರು ತಾವು ಬೆಳೆದ ಬೆಳೆಯನ್ನು ರೋಟರ್ನಿಂದ ನಾಶ ಮಾಡ್ತಿದ್ದಾರೆ.
ಜೂನ್ ಬಳಿಕ ಜಿಲ್ಲೆಯಲ್ಲಿ ಮಳೆ ಬಾರದೆ ಬೆಳೆದ ಬೆಳೆಗೆ ವಿವಿಧ ರೋಗ ಬರುತ್ತಿದೆ. ಈ ಹಿನ್ನೆಲೆ ಹತ್ತಿ, ಜೋಳ, ಸೋಯಾಬಿನ್, ಮೆಣಸಿನಕಾಯಿ, ಟೊಮೆಟೋ, ಸೌತೆಕಾಯಿ ಹೀಗೆ ವಿವಿಧ ಬೆಳೆಯನ್ನು ರೈತರು ನಾಶ ಮಾಡ್ತಿದ್ದಾರೆ. ತಿಂಗಳ ಇಡೀ ಹೊಲದಲ್ಲಿ ದುಡಿದು ಮಗುವಂತೆ ಪಾಲನೆ ಮಾಡಿದ್ದ ಬೆಳೆಗೆ ಸ್ವತಃ ರೈತರೆ ಈಗ ಕತ್ತರಿ ಹಾಕಿದ್ದಾರೆ.
