ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ರಾಂಚಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಫೆಬ್ರವರಿ 23ರಂದು ಅಂದ್ರೆ ಇಂದಿನಿಂದ ಶುರುವಾಗಲಿದೆ
ಸರಣಿಯ ನಾಲ್ಕನೇ ಪಂದ್ಯದಿಂದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹೊರಗಿಟ್ಟು ವಿಶ್ರಾಂತಿ ಕೊಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಆಡುವ 11ರ ಬಳಗಕ್ಕೆ ಆಕಾಶ್ ದೀಪ್ ಸ್ಥಾನ ಪಡೆಯಲಿದ್ದಾರೆ ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ನೀಡಿರುವ ಮಾಹಿತಿಗಳ ಮೂಲಕ ತಿಳಿದು ಬಂದಿದೆ
ರಣಜಿ ಟ್ರೋಫಿ ಕ್ರಿಕೆಟ್ ಆಡಲು ತೆರಳಿದ್ದ ಮುಖೇಶ್ ಕುಮಾರ್ ಅಂತಿಮ ಎರಡು ಪಂದ್ಯಗಳ ಸಲುವಾಗಿ ತಂಡಕ್ಕೆ ಹಿಂದಿರುಗಿದ್ದಾರೆ. ದ್ವಿತೀಯ ಟೆಸ್ಟ್ನಲ್ಲಿ ಮುಖೇಶ್ ಕುಮಾರ್ ಅವರನ್ನು ಆಡಿಸಲಾಗಿತ್ತು.
ಆಕಾಶ್ ದೀಪ್ ದೇಶಿ ಕ್ರಿಕೆಟ್ನಲ್ಲಿ ಈವರೆಗೆ 30 ಪಂದ್ಯಗಳನ್ನು ಆಡಿದ್ದಾರೆ. 2019ರಲ್ಲಿ ಪ್ರಥಮದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಆಕಾಶ್ ಈವರೆಗೆ ಒಟ್ಟು 104 ವಿಕೆಟ್ಗಳನ್ನು ಪಡೆದಿದ್ದಾರೆ. 23.58ರ ಸರಾಸರಿ ಮತ್ತು 3.03ರ ಎಕಾನಮಿ ಹೊಂದಿದ್ದಾರೆ. ಒಂದು ವೇಳೆ ಆಕಾಶ್ ದೀಪ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಆದರೆ, ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಟೆಸ್ಟ್ ತಂಡಕ್ಕೆ ಕಾಲಿಟ್ಟ ನಾಲ್ಕನೇ ಆಟಗಾರ ಎನಿಸಲಿದ್ದಾರೆ.