ಕಲಿಯುಗದ ಕರುಣಾಮಯಿ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ನಮ್ಮನ್ನಗಲಿ ಎರೆಡು ತಿಂಗಳು ಕಳೆದಿದೆ. ಅವರನ್ನ ನೆನೆಯದ ದಿನಗಳೇ ಇಲ್ಲ ಎನ್ನುವಂತಾಗಿದೆ. ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ ಶ್ರೀ.ಅವರ ಸಾಮಾಜಿಕ ಕೆಲಸಗಳು, ಅವರು ಅಭಿಮಾನಿಗಳ ಜೊತೆ ಇರುತ್ತಿದ್ದ ರೀತಿ ಎಲ್ಲವೂ ಎಲ್ಲರಿಗೂ ಮಾದರಿಯಾಗಿದೆ . ಇಡೀ ಜಗತ್ತಿಗೆ ಅಪ್ಪು ಅಗಲಿರುವ ವಿಚಾರ ತಿಳಿದಿದೆ. ಆದರೆ ಅವರ ಕುಟುಂಬದ ಒಬ್ಬರಿಗೆ ಮಾತ್ರ ಆ ಕಹಿ ಸತ್ಯ ಇನ್ನು ತಿಳಿದಿಲ್ಲ.
ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ, ಪುನೀತ್ ರಾಜ್‌ಕುಮಾರ್ ಅವರ ಸೋದರ ಅತ್ತೆ. ಇವರಿಗೆ ಪುನೀತ್‌ರಾಜ್ ಕುಮಾರ್ ನಿಧನ ಹೊಂದಿರುವ ವಿಚಾರ ಇನ್ನೂ ಕೂಡ ತಿಳಿಸಿಲ್ಲ. ಕುಟುಂಬಸ್ಥರು ಕೂಡ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.ಅವರಿಂದ ಈ ವಿಚಾರವನ್ನು ಮುಚ್ಚಿಡಲು ಮುಖ್ಯ ಕಾರಣ ಎಂದರೆ ಅವರಿಗೆ ವಯಸ್ಸಾಗಿದೆ.

ಜೊತೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ನಿಧನದ ವಿಚಾರ ತಿಳಿದರೆ ಅವರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಈ ಹಿಂದೆ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಲಘು ಹೃದಯಾಘಾತ ಆದಾಗ, ನಾಗಮ್ಮ ಅವರಿಗೆ ದೊಡ್ಡ ಆಘಾತ ಆಗಿತ್ತಂತೆ. ಇನ್ನು ಅಪ್ಪು ವಿಚಾರ ಕೇಳಿದರೆ ಅಪಾಯವಾಗಬಹುದು ಎಂದು ಈ ವಿಚಾರವನ್ನು ಮುಚ್ಚಿಟ್ಟಿದ್ಧಾರೆ.