ಮಂಡ್ಯ: ಅಸಿಡ್ ಸೋರಿಕೆಯಿಂದ ಮುಚ್ಚಿದ್ದ ಕಾರ್ಖಾನೆ ಮತ್ತೆ ಆರಂಭ ಹಿನ್ನಲೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯ ತಾಲ್ಲೂಕಿನ ಬಿದರಕಟ್ಟೆ ಗ್ರಾಮದಲ್ಲಿರುವ ಕೀರ್ತಿ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ನಡೆದಿದೆ. ಅಸಿಡ್ ಸೋರಿಕೆಯಿಂದ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು.
ಈ ಹಿನ್ನಲೆ ಕಾರ್ಖಾನೆ ಬಾಗಿಲು ಹಾಕಿಸಿದ್ದ ಗ್ರಾಮಸ್ಥರು. ಆದ್ರೆ ಇದೀಗಾ ಮತ್ತೆ ಕಾರ್ಖಾನೆ ಕಾರ್ಯಾರಂಭ ಹಿನ್ನಲೆ ಇದ್ದರಿಂ ರೊಚ್ಚಿಗೆದ್ದ ಗ್ರಾಮಸ್ಥರು ಕಾರ್ಖಾನೆಗೆ ಭೇಟಿ ನೀಡಿ ಪ್ರತಿಭಟನೆ ನಡೆಸಿದ್ದರು. ಇನ್ನೂ ಪ್ರತಿಭಟನಾ ಸ್ಥಳಕ್ಕೆ ಶಾಸಕ ರವಿಕುಮಾರ್ ಗಣಿಗ, ತಹಶೀಲ್ದಾರ್ ಡಾ.ಶಿವಕುಮಾರ ಬಿರಾದರ, ಡಿವೈಎಸ್ಪಿ ಶಿವಮೂರ್ತಿ ಜೊತೆಯಲ್ಲಿ ಆಗಮಿಸಿ ಸ್ಥಳೀಯರ ದೂರು ಸಮಸ್ಯೆಗಳನ್ನು ಆಲಿಸಿದರು.
ಇನ್ನೂ ಈಗಾಗಲೇ ಅಸಿಡ್ ಸೋರಿಕೆಯಿಂದ ಜನ ಜಾನುವಾರು, ಪರಿಸರಕ್ಕೆ ಧಕ್ಕೆಯಾಗಿದೆ. ಇಂತಹ ಆತಂಕದ ಸ್ಥಿತಿಯಲ್ಲಿ ತಾಲ್ಲೂಕು ಆಡಳಿತ, ಸ್ಥಳೀಯ ಗ್ರಾಪಂ ಅಥವಾ ಪರಿಸರ ಇಲಾಖೆಯ ಅನುಮತಿ ಇಲ್ಲದೆ ಉದ್ಯಮ ಅರಂಭಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ನಾನಿರುವವರೆಗೆ ಕಾರ್ಖಾನೆ ತೆರೆಯಲು ಬಿಡುವುದಿಲ್ಲ,
ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಕೂಡಲೇ ಉತ್ಪಾದನೆ ಸ್ಥಗಿತಗೊಳಿಸುವಂತೆ ಕಾರ್ಖಾನೆ ಸಿಬ್ಬಂದಿಗೆ ಶಾಸಕ ಸೂಚನೆ ನೀಡಿದರು. ಶಾಸಕ ರವಿಕುಮಾರ್ ಗಣಿಗ ಸೂಚನೆ ಬೆನ್ನಲ್ಲೇ ಕಾರ್ಖಾನೆ ವ್ಯವಸ್ಥಾಪಕರು ಘಟಲ ಸ್ಥಗಿತಗೊಳಿಸುವುದಾಗಿ ಬೇಬಿ ಗ್ರಾಮ ಪಂಚಾಯಿತಿಗೆ ಪತ್ರ ಕೊಟ್ಟು ಸಮಸ್ಯೆ ಪರಿಹರಿಸಿದರು. ಕಾರ್ಖಾನೆಯ ಸ್ಥಳದಲ್ಲಿ ಬೆಳಗ್ಗಿನಿಂದ ಬಿಗುವಿನ ಪರಿಸ್ಥಿತಿ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.