ಮಂಡ್ಯ;- ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮಂಡ್ಯದ ಪಾಂಡವಪುರದ ಬನಘಟ್ಟದ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ನಡೆದಿದೆ. ಕಾರಿನಲ್ಲಿ ನಾಲ್ವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ನಿಯಂತ್ರಣ ತಪ್ಪಿ ವಿಸಿ ನಾಲೆಗೆ
ಶಿಫ್ಟ್ ಕಾರು ಬಿದ್ದಿದೆ. ಇಂದುಸಂಜೆ 4.45ರ ವೇಳೆಯಲ್ಲಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ವಿಸಿ ನಾಲೆಗೆ ಇಳಿದು ಪರಿಶೀಲನೆ ಮಾಡಿದ್ದಾರೆ. ನಿನ್ನೆಯಷ್ಟೆ ಕೆಆರ್ಎಸ್ ಡ್ಯಾಂನಿಂದ ವಿಸಿ ನಾಲೆಗೆ ನೀರು ಬಿಡಲಾಗಿತ್ತು. ಇದೀಗ ತುಂಬಿದ ಕಾಲುವೆಗೆ ಕಾರು ಬಿದ್ದಿದ್ದು, ಅವಘಡ ಸಂಭವಿಸಿದೆ.