ಬೆಂಗಳೂರು: ಸಹನಾ ಬುಕ್ ಹೌಸ್ ವತಿಯಿಂದ ಜನವರಿ 7 ರಂದು ಹೊಸ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್’ನಲ್ಲಿ ಲೇಖಕಿ ಎಚ್.ವಿ.ಮಿನಾ ಅವರು ಬರೆದಿರುವ “ಚಿಟ್ಟೆ ದುಂಬಿಯ ಚಿತ್ತಾರ”ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಲೇಖಕಿ ನಾನು ಮಕ್ಕಳಿಗಾಗಿಯೇ ಈ ಕಥ ಗುಚ್ಚವನ್ನು ರಚಿಸಿದ್ದೇನೆ . ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಉಂಟಾಗಲಿ ಎಂದು ಜೊತೆಗೆ ಪ್ರಾಣಿ, ಪಕ್ಷಿಗಳು ಗಿಡಮರಗಳು ಹೇಗೆ ನಿಮ್ಮೊಂದಿಗೆ ಭಾವನಾತ್ಮಕವಾಗಿ ಸಂಬಂಧವನ್ನು ಬೆಳೆಸಿದೆ ಎಂದು ತಿಳಿಸುವುದೇ ಇದರ ಉದ್ದೇಶವಾಗಿದೆ. ಇಂದಿನ ಮಕ್ಕಳಲ್ಲಿ ಓದುವ ಸಂಸ್ಕೃತಿ ಹೆಚ್ಚಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ಉಪನ್ಯಾಸಕರು ಬೆಲೂರು ರಾಮಮೂರ್ತಿ, ಹಾಗೂ ಲಯನ್ ಅನಂತ ಪದ್ಮನಾಭ ಸಮಾಜ ಸೇವಕರು, ಆದರಶ ಪೈ ಸಮಾಜ ಸೇವಕರು, ಹರೀಶ್ ಕುಮಾರ್ ರಾವ್ ಸಾಪ್ಟ್ ವೇರ್ ಇಂಜಿನಿಯರ್ ಹಾಗೂ ಟ್ರೆಂಡ್ಸ್ ಪತ್ರಿಕೆಯ ಯುವ ವೃಂದದವರು, ಆದರ್ಶ ಪೈ ಹವ್ಯಾಸಿ ವ್ಯಂಗ್ಯ ಚಿತ್ರಾಕಾರರು, ಯು.ಎನ್.ಐ ಸುದ್ದಿಸಂಸ್ಥೆಯ ಮುಖ್ಯಸ್ಥರಾದ ಕುಮಾರ್ ರೈತ. ಚಲನಚಿತ್ರ ನಟರಾದ ಪವರ್ ಸೂರ್ಯ. ಗ್ರಾಫಿಕ್ ಡಿಸೈನರ್ ಮಹೇಶ್ ಇನ್ನು ಮುಂತಾದ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
