ಆಂಧ್ರಪ್ರದೇಶ : ಶಾಲಾ ಮಕ್ಕಳಿದ್ದ ಬಸ್ ಪಲ್ಟಿಯಾಗಿ, ಕೆರೆಗೆ ಬಿದಿದ್ದು, ಪರಿಣಾಮ ಐವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಮಂಡಸ ಮಂಡಲದ ವಿವೇಕಾನಂದ ಶಾಲೆಗೆ ಸೇರಿದ ಮಂಡಸ ಉಮಗಿರಿ ಮೂಲಕ ಬುಡಾರು ಸಿಂಗ್ಗೆ 35 ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಂಡಸ ಮತ್ತು ಉಮಗಿರಿ ನಡುವೆ ಉರುಳಿ ಕೆರೆಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಧಾವಿಸಿ ಬಸ್ನಲ್ಲಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.