ಹುಬ್ಬಳ್ಳಿ:ಇಲ್ಲಿಯ ಅಮರಗೋಳದ ಎಪಿಎಂಸಿ ಹಿಂಭಾಗದ ಹೊಲದಲ್ಲಿ ಗೋಕುಲ ರಸ್ತೆಯ ಬಂಜಾರ ಕಾಲೊನಿಯ ಚಂದ್ರಶೇಖರ ಲಮಾಣಿ(47) ಅವರ ಶವ ಪತ್ತೆಯಾಗಿದೆ.
ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತರ ಪತ್ನಿ ಮಂಜುಳಾ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ‘ಸಾವಿಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.
ಮರಣೋತ್ತರ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.