ಆರೋಗ್ಯ ಗುಣಗಳನ್ನು ಅಡಗಿರಿಸಿಕೊಂಡಿರುವ ಅನೇಕ ಗಿಡಗಳ ಪೈಕಿ ಬಿಲ್ವಪತ್ರೆ ಮುಂಚೂಣಿಯಲ್ಲಿ ಸಿಗುತ್ತದೆ. ಶಿವನಿಗೂ ಪ್ರಿಯವಾದ ಬಿಲ್ವಪತ್ರೆ ಆರೋಗ್ಯವನ್ನು ಕಾಪಾಡುವ ಅನೇಕ ಗುಣಗಳನ್ನು ಹೊಂದಿದೆ. ಸಾಮಾನ್ಯವಾಗಿ ಶಿವನ ದೇವಸ್ಥಾನಗಳ ಬಳಿ ಈ ಬಿಲ್ವಪತ್ರೆ ಕಾಣಸಿಗುತ್ತದೆ. ಬಿಲ್ವಪತ್ರೆಯ ಎಲೆ, ಬೇರು, ಹಣ್ಣು, ತೊಗಟೆ ಹೀಗೆ ಎಲ್ಲಾ ಭಾಗಗಳೂ ಕೂಡ ಔಷಧೀಯ ಗುಣಗಳನ್ನು ಹೊಂದಿದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಮನೆಮದ್ದಾಗಿ ಬಿಲ್ವಪತ್ರೆ ಸಿಗುತ್ತದೆ.
- ಬಿಲ್ವಪತ್ರೆ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ. ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡ ಸಮೃದ್ಧವಾಗಿದೆ.
- ವಾತ, ಪಿತ್ತ ಮತ್ತು ಕಫ ಸಮಸ್ಯೆಗಳು ನಮ್ಮ ದೇಹದಲ್ಲಿ ಉಂಟಾಗುತ್ತವೆ. ಅವುಗಳ ನಡುವಿನ ಯಾವುದೇ ವ್ಯತ್ಯಾಸವು ನಮ್ಮನ್ನು ಖಿನ್ನತೆಗೆ ಒಳಪಡಿಸುತ್ತದೆ.
- ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಕರಗುತ್ತದೆ. ಹೃದ್ರೋಗ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಇದು ಚೆನ್ನಾಗಿ ಕೆಲಸ ಮಾಡುತ್ತದೆ
- ಇನ್ನು ಈ ಎಲೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
- ಪೈಲ್ಸ್ ಸಮಸ್ಯೆ ಇರುವವರು, ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ತಿನ್ನುವುದು ಪ್ರಯೋಜನಕಾರಿ ಎಂದು ಸಾಬೀತಾಗಿದೆ.
- ಈ ಎಲೆಗಳಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚಿನ ಫೈಬರ್ ಇದೆ, ಹಾಗಾಗಿ ಇದು ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
- ಬಿಲ್ವಪತ್ರೆ ಎಲೆಯ ರಸವನ್ನು ಕುಡಿಯುವುದರಿಂದ ಮೂತ್ರಪಿಂಡ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ