ಸಾಮಾನ್ಯವಾಗಿ ಬೈಕ್ ಮೇಲೆ ಮೂರನೇ ವ್ಯಕ್ತಿ ಪ್ರಯಾಣಿಸುವುದನ್ನು ಕಂಡರೆ ಪೊಲೀಸರು ದಂಡ ಹಾಕಲು ಮುಂದಾಗುತ್ತಾರೆ. ಆದರೆ, ಇಲ್ಲಿ ಬೈಕ್ನಲ್ಲಿ ಎರಡು ನಾಯಿಗಳು, ಒಂದು ಕೋಳಿ ಮತ್ತು ಭಾರೀ ಸಾಮಾನುಗಳೊಂದಿಗೆ ಒಂದೇ ಬಾರಿಗೆ ಏಳು ಜನರು ಪ್ರಯಾಣಿಸುವುದನ್ನು ನೋಡಬಹುದು.
ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಈ ವಿಡಿಯೋ ಪ್ರಕಾರ ಇಡೀ ಕುಟುಂಬವೇ ಬೈಕ್ ಮೇಲೆ ಪ್ರಯಾಣಿಸುತ್ತಿರುವಂತೆ ಇತ್ತು.

ಇದು ವೈರಲ್ ಆಗಿದೆ. ಒಂದು ಬೈಕ್ನಲ್ಲಿ ಏಳು ಜನ, ಎರಡು ನಾಯಿಗಳು, ಒಂದು ಕೋಳಿ ಮತ್ತು ಲಗೇಜ್ ಕಾಣಬಹುದು. ಕೆಲವರು ಈ ವಿಡಿಯೋವನ್ನು ವಿವಿಧ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಿದ್ದಾರೆ.

