ನಮ್ಮ ಸುತ್ತಲೂ ಅನೇಕ ಸಸ್ಯಗಳಿವೆ, ಅವುಗಳಲ್ಲಿ ಕೆಲವು ಔಷಧೀಯ ಮತ್ತು ವಾಸ್ತುಶಿಲ್ಪದ ಗುಣಲಕ್ಷಣಗಳಿಂದ ತುಂಬಿವೆ. ಅವುಗಳಲ್ಲಿ ಅಲೋವೆರಾ ಅಗ್ರಸ್ಥಾನದಲ್ಲಿದೆ. ಈ ಸಸ್ಯವು ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಇದು ವಾಸ್ತುವಿನಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.
ವರ್ಕ್ ಫ್ರಮ್ ಬೆಡ್ ಕೇಳಿದ್ದೀರಾ?: ನಿತ್ಯ 8 ಗಂಟೆ ನಿದ್ದೆ ಮಾಡಿದ್ರೆ ₹10 ಲಕ್ಷ ಸಂಬಳ, ಈ ಆಫರ್ ಮಿಸ್ ಮಾಡ್ಕೊಬೇಡಿ!
ಎಲ್ಲೆಡೆ ವ್ಯಾಪಕವಾಗಿ ಬಳಸಲ್ಪಡುವ ಸಸ್ಯ ಪ್ರಭೇದಗಳಲ್ಲಿ ಅಲೋವೆರಾ ಕೂಡ ಒಂದು. ದೇಹದ ಆಂತರಿಕ ಮತ್ತು ಬಾಹ್ಯ ಚಿಕಿತ್ಸೆಗೆ ಅಲೋವೆರಾ ತುಂಬಾ ಪ್ರಯೋಜನಕಾರಿ ಆಗಿದೆ.
ಅನೇಕ ಮಂದಿ ಮನೆಯಲ್ಲಿ ಅಲೋವೆರಾ ಗಿಡವನ್ನು ಬೆಳೆಸಿದ್ದಾರೆ. ಆದರೆ ಈ ಅಲೋವೆರಾ ಗಿಡವನ್ನು ನಾವು ಬಳಸುತ್ತೇವೆಯೇ ಎಂಬುವುದೇ ದೊಡ್ಡ ಪ್ರಶ್ನೆ ಆಗಿದೆ. ಅಲೋವೆರಾವನ್ನು ಬಳಸಬೇಕಾದರೆ, ಮೊದಲು ನಾವು ಅಲೋವೆರಾದಿಂದ ಸಿಗುವ ಪ್ರಯೋಜನಗಳೇನು ಎಂಬುವುದನ್ನು ತಿಳಿದುಕೊಳ್ಳಬೇಕು. ಹಾಗಾದರೆ ಅಲೋವೆರಾದಿಂದ ಆಗುವ ಲಾಭಗಖೇನು ಎಂದು ತಿಳಿದುಕೊಳ್ಳೋಣ ಬನ್ನಿ.
ನಾವು ಅಲೋವೆರಾವನ್ನು ಕತ್ತರಿಸಿದಾಗ, ಹಳದಿ, ಕಹಿ ದ್ರವವು ಹೊರಬರುತ್ತದೆ. ಇದನ್ನು ಇಂಗ್ಲಿಷ್ನಲ್ಲಿ ರಬ್ಬರ್ ಹಾಲು ಅಥವಾ ಲ್ಯಾಟೆಕ್ಸ್ ಎಂದು ಕರೆಯಲಾಗುತ್ತದೆ. ಈ ಲ್ಯಾಟೆಕ್ಸ್ ವಿಷಕಾರಿಯಾಗಿದೆ. ಹಾಗಾಗಿ ಅಲೋವೆರಾವನ್ನು ಬಳಸುವಾಗ ನಾವು ತುಂಬಾ ಜಾಗರೂಕರಾಗಿರಬೇಕು. ಅಲೋವೆರಾ ಎಲೆಯನ್ನು ಕತ್ತರಿಸಿದ ಬಳಿಕ ಅದನ್ನು ನೀರಿನಲ್ಲಿ ಅರ್ಧ ಗಂಟೆಯವರೆಗೆ ನೆನೆಸಿ ನಂತರ ಬಳಸಿ.
ಇಂದು ಅಂಗಡಿಗಳಲ್ಲಿ ಲಭ್ಯವಿರುವ ಅನೇಕ ಸೌಂದರ್ಯವರ್ಧಕ ಉತ್ಪನ್ನಗಳನ್ನು ಅಲೋವೆರಾದಿಂದ ತಯಾರಿಸಲಾಗಿದೆ. ಲೋಷನ್ ಮತ್ತು ಕ್ರೀಮ್ಗಳಿಗೆ ಸೇರಿಸಲಾದ ಅಲೋವೆರಾ ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ತಾಜಾ ಅಲೋವೆರಾದ ನೇರ ಬಳಕೆಯು ಕೃತಕ ಪದಾರ್ಥಗಳಿಗಿಂತ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಅಲೋವೆರಾ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅಲೋವೆರಾದಲ್ಲಿ ವಿಟಮಿನ್ ಎ, ಸಿ, ಇ ಮತ್ತು ಬಿ ಕಾಂಪ್ಲೆಕ್ಸ್ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿವೆ.
ಅಲೋವೆರಾದಿಂದ ಲ್ಯಾಟೆಕ್ಸ್ ಅನ್ನು ಮಲಬದ್ಧತೆಗೆ ಚಿಕಿತ್ಸೆ ನೀಡಲು ನೈಸರ್ಗಿಕ ಪರಿಹಾರವಾಗಿ ಬಳಸಬಹುದು
ಅಲೋವೆರಾವು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರ ಜೊತೆಗೆ, ಉತ್ಕರ್ಷಣ ನಿರೋಧಕಗಳಲ್ಲಿಯೂ ಸಮೃದ್ಧವಾಗಿದೆ. ಇವುಗಳು ನಮ್ಮ ದೇಹದಲ್ಲಿರುವ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುವ ಫ್ರಿ ರಾಡಿಕಲ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ
ಅಲೋವೆರಾ ಗಿಡವನ್ನು ನಮ್ಮ ಮನೆಯಲ್ಲಿ ಬೆಳೆಸುವುದು ತುಂಬಾ ಸುಲಭ. ಇದಕ್ಕೆ ಹೆಚ್ಚಿನ ಶ್ರಮ ಪಡುವ ಅಗತ್ಯವಿಲ್ಲ. ಅಲೋವೆರಾವನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ಮುಕ್ತವಾಗಿ ಬೆಳೆಸಬಹುದು