ಬೆಂಗಳೂರು: ಬಿಬಿಎಂಪಿ ವಾರ್ಡ್ ನಲ್ಲಿ ರಸ್ತೆ ಮಧ್ಯೆ ಸೈಟ್ ಇದೆ ಎಂದು ವ್ಯಕ್ತಿಯೊಬ್ಬ ಗುಣಿ ತೋಡಿರುವ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಬಸಾಪುರಂ ರೋಡಿನ ಚಿಕ್ಕ ತೋಗೂರು ರಸ್ತೆ ಮಧ್ಯೆ ಸೈಟ್ ಇದೆ ಅಂತಾ ಮಂಜುನಾಥ್ ಎಂಬಾತ ಕಿಡಿಗೇಡಿ ಕೆಲಸ ಮಾಡಿದ್ದಾನೆ. ಇದೀಗ ಕೇಬಲ್ ಮಂಜುನಾಥ್ ವಿರುದ್ಧ ಸ್ಥಳೀಯರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಕಚ್ಚಾ ರಸ್ತೆಗೆ ಡಾಂಬರ್ ಹಾಕೋಕು ಬಿಡ್ತಿಲ್ಲ, ರಸ್ತೆಯ ಬದಿಯ ಮರ ಕಟ್ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

