ಪಾಕಿಸ್ತಾನ: ಭೂಮಿಯ ಮೇಲಿಂದಲೇ ಗುರಿಗಳನ್ನು ಟಾರ್ಗೆಟ್ ಮಾಡುವ ಬಾಬರ್ ಕ್ರೂಸ್ ಮಿಸೈಲ್ ಸುಧಾರಿತ ಆವೃತ್ತಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಸುಮಾರು 900 ಕಿಲೋಮೀಟರ್ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ಇದಕ್ಕೂ ಮೊದಲು ಇದೇ ಮಾದರಿಯ ಕ್ಷಿಪಣಿಯನ್ನು ಪಾಕಿಸ್ತಾನ ಪರೀಕ್ಷೆ ನಡೆಸಿತ್ತು. ಆದರೆ ಈ ಕ್ಷಿಪಣಿ ಕೇವಲ 450 ಕಿಲೋಮೀಟರ್ ದೂರದ ಗುರಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿತ್ತು.
ಈಗ ಅದೇ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಪರೀಕ್ಷೆ ಮಾಡಲಾಗಿದೆ. ಸ್ವದೇಶಿ ನಿರ್ಮಿತ ಬಾಬರ್ ಕ್ರೂಸ್ ಮಿಸೈಲ್ 1ಬಿ ಅನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ಅಧಿಕೃತ ಹೇಳಿಕೆ ನೀಡಿದೆ.ಇದು ಭೂಮಿ ಮೇಲಿನ ಗುರಿಯನ್ನು ಮಾತ್ರವಲ್ಲದೇ ಸಮುದ್ರಗಳ ಮೇಲಿನ ಗುರಿಯನ್ನು ಕೂಡಾ ತಲುಪಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಸೇನೆ ಹೇಳಿಕೊಂಡಿದೆ. ಲೆಫ್ಟಿನೆಂಟ್ ಜನರಲ್ ನದೀಮ್ ಝಕಿ ಮಂಜ್, ಡೈರೆಕ್ಟರ್ ಜನರಲ್,

ಕಾರ್ಯತಂತ್ರದ ಯೋಜನೆಗಳ ವಿಭಾಗದ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ನದೀಮ್ ಝಕಿ ಮಂಜ್, ರಾಷ್ಟ್ರೀಯ ಇಂಜಿನಿಯರಿಂಗ್ ಮತ್ತು ವೈಜ್ಞಾನಿಕ ಆಯೋಗದ ಅಧ್ಯಕ್ಷರಾದ ಡಾ.ರಾಝಾ ಸಮರ್ ಮುಂತಾದವರು ಬಾಬರ್ ಕ್ರೂಸ್ ಮಿಸೈಲ್ ಕ್ಷಿಪಣಿ ಪರೀಕ್ಷೆ ವೇಳೆ ಹಾಜರಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಅಂದರೆ ಆಗಸ್ಟ್ನಲ್ಲಿ ಪತಾಹ್-1 ಎಂಬ ರಾಕೆಟ್ ಸಿಸ್ಟಮ್ ಅನ್ನು ಪಾಕ್ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು ಎಂಬುದು ಉಲ್ಲೇಖಾರ್ಹವಾಗಿದೆ.