ತಾಂತ್ರಿಕ ದೋಷದಿಂದ ಬೆಂಕಿಗಾಹುತಿಯಾದ ಥಾರ್ ವಾಹನ

ಧಾರವಾಡ : ತಾಂತ್ರಿಕ ದೋಷದಿಂದ ಥಾರ್ ವಾಹನ ಬೆಂಕಿಗಾಹುತಿಯಾಗಿದೆ. ಧಾರವಾಡದ ಸವದತ್ತಿ ರಸ್ತೆಯಲ್ಲಿಯ ಕಾಶಿನಗರದ ಬಳಿ ಘಟನೆ ನಡೆದಿದೆ.   ಧಾರವಾಡದಿಂದ ಸವದತ್ತಿಗೆ ಹೊರಟಿದ್ದ ಮಹಿಂದ್ರಾ ಥಾರ್ ಕಾರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ರಸ್ತೆಯಲ್ಲೇ ಧಗಧಗಿಸಿದ ಸಾರಿಗೆ ಬಸ್ ; 25 ಮಂದಿ ಪ್ರಯಾಣಿಕರು ಸೇಫ್ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ. ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.