ಬೆಂಗಳೂರು: ಮತ್ತೊಂದು ಪ್ರತಿಷ್ಠಿತ ಉದ್ದಿಮೆ ರಾಜ್ಯದ ಕೈಜಾರುವ ಸಂಭವ ಇದೆ. ಅಮೆರಿಕಾದ ಟೆಸ್ಲಾ ಕಂಪನಿ (Tesla Company) ಆರಂಭದಲ್ಲಿ ಕರ್ನಾಟಕದಲ್ಲಿ ತಮ್ಮ ಉತ್ಪಾದನೆ ಆರಂಭಿಸಲು ಉತ್ಸುಕತೆ ತೋರಿತ್ತು. ಕರ್ನಾಟಕದಲ್ಲಿಯೇ ಮೊದಲ ಉತ್ಪಾದನಾ ಘಟಕ ಹೊಂದಲು ಟೆಸ್ಲಾ ಪ್ಲಾನ್ ಮಾಡಿದೆ ಎಂದು 2021ರ ಫೆಬ್ರವರಿ 14ರಂದು ವರದಿಯಾಗಿತ್ತು. ಆದ್ರೆ ದಿಢೀರ್ ಬೆಳವಣಿಗೆಯಲ್ಲಿ ಟೆಸ್ಲಾ ಕಂಪನಿ ಮಹಾರಾಷ್ಟ್ರ, ತಮಿಳುನಾಡು ಜೊತೆಗೆ ಗುಜರಾತ್ನಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಘಟಕ ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಅಂದ ಹಾಗೇ ಟೆಸ್ಲಾ ಸಂಸ್ಥೆಯ ಯೋಜನೆಗಳು ಇನ್ನೂ ಅಂತಿಮಗೊಂಡಿಲ್ಲ. ಭವಿಷ್ಯದಲ್ಲಿ ಈ ಪ್ಲಾನ್ ಬದಲಾಗಬಹುದು ಎಂದು ಹೇಳಲಾಗಿದೆ. ಮುಂದಿನ ಜನವರಿಯಲ್ಲಿ ಅಹಮದಾಬಾದ್ನಲ್ಲಿ ನಡೆಯುವ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಈ ಬಗ್ಗೆ ಅಂತಿಮ ಘೋಷಣೆ ಹೊರಬೀಳಬಹುದು ಎನ್ನಲಾಗಿದೆ. ಟೆಸ್ಲಾ ಕಂಪನಿ ಮತ್ತು ಮೋದಿ (Narendra Modi) ಸರ್ಕಾರದ ನಡುವೆ ಒಪ್ಪಂದ ಸಂಬಂಧ ಚರ್ಚೆಗಳು ನಡೀತಿವೆ