ಬೆಂಗಳೂರು: ದರ್ಶನ್ ರೇಣುಕಾಸ್ವಾಮಿ ಮೇಲೆ ನೆಡೆಸಿದ ಒಂದೊಂದು ಕ್ರೌರ್ಯದ ಭಯಾನಕ ಸತ್ಯಗಳು ಈಗ ಬಯಲಾಗ್ತಿದೆ. ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿಗೆ ನರಕ ದರ್ಶನ ಮಾಡಿಸಿದ್ದ ರಕ್ತಚರಿತ್ರೆಯಲ್ಲಿ ಮತ್ತೊಂದು ಅಟ್ಟಹಾಸ ಬಯಲಾಗಿದೆ..ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಆತನ ಎಡಗಣ್ಣಿಗೆ ಗಂಭೀರವಾದ ಗಾಯವಾಗಿತ್ತು. ಇದೀಗ ಎಡಗಣ್ಣಿಗೆ ಹೇಗೆ ಗಾಯ ಆಗಿತ್ತು ಎಂಬುದರ ಕುರಿತು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಹಾಗಾದರೆ ಅಂದು ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಎಡೆಗಣ್ಣಿಗೆ ಏಟು ಬಿದ್ದಿದ್ದು ಹೇಗೆ? ಹೊಡಿರಿ ಬಾಸ್ ಹೊಡಿರಿ ಅತ್ತಿಗೆನ ಕೆಟ್ಟ ದೃಷ್ಟಿಯಲ್ಲಿ ನೋಡಿದ ಈ ಕಣ್ಣು ಇರಬಾರದು ಎಂದು ಡಿ ಗ್ಯಾಂಗ್ ಪಟಾಲಂ ಪ್ರಚೋದನೆ ಮಾಡುತ್ತಿತ್ತು ಆಗ ರಾಘವೇಂದ್ರ ಹಾಗು ನಂದೀಶ ರೇಣುಕಾಸ್ವಾಮಿಯ ಎರಡು ಕೈಗಳನ್ನು ಹಿಡಿದುಕೊಂಡಿದ್ದರು. ಈ ವೇಳೆ ದರ್ಶನ್ ಸಿನಿಮಾ ಸ್ಟೈಲ್ ನಲ್ಲಿ ಶ್ರೀ ರೇಣುಕಾಸ್ವಾಮಿ ಕಣ್ಣಿಗೆ ಪಂಚ್ ಕೊಟ್ಟಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.
Agnipath Scheme: ಅಗ್ನಿಪಥ್ ಯೋಜನೆಯಲ್ಲಿ ಬದಲಾವಣೆಗೆ ಮುಂದಾದ ಕೇಂದ್ರ: ಈ ನಿಯಮಗಳು ಪರಿಷ್ಕರಣೆ ಸಾಧ್ಯತೆ
ಸ್ವಾಮಿ ಕೊಲೆ ಕೇಸಿನ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧವೇ ಇಲ್ಲದವನು ತಾನಾಗೇ ಬಂದು ಕೇಸ್ ನಲ್ಲಿ ಫಿಕ್ಸ್ ಆಗಿದ್ದಾನೆ. ಹೌದು. ದಾರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದವನೂ ಈಗ ಕಂಬಿಹಿಂದೆ ಹೋಗಿದ್ದಾನೆ. ಕೊಲೆ ಆದ ಮೇಲೆ ಈ ಕೇಸ್ ನಲ್ಲಿ ಯಾರ್ಯಾರು ಸರೆಂಡರ್ ಆಗ ಬೇಕು ಎಂದು ಪ್ಲಾನ್ ಮಾಡಿದ್ರು ಆಗ ರಾಘವೇಂದ್ರ , ಕಾರ್ತಿಕ್ ಹಾಗು ನಿಖಿಲ್ ನಾಯಕ್ ಸೆರೆಂಡರ್ ಆಗೋದಾಗಿ ಫಿಕ್ಸ್ ಆಗಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ರಾಘವೇಂದ್ರ ಸರೆಂಡರ್ ಆಗಲು ರಾಘವೇಂದ್ರ ಹಿಂದೆ ಸರಿದಿದ್ದ.
ಆಗ ಇನ್ನೊಬ್ಬನನ್ನು ಹುಡುಕುತ್ತಿದ್ದ ಕಾರ್ತಿಕ್, ನಿಖಿಲ್ ಗೆ ಸಿಕ್ಕವನೇ ಹಳೇ ದೋಸ್ತ್ ಕೇಶವಮೂರ್ತಿ. ಉತ್ತರಹಳ್ಳಿ ಬಳಿ ಟೀ ಕುಡಿಯುತ್ತಿದ್ದ ನೀಂತಿದ್ದ ಕೇಶವಮೂರ್ತಿಗೆ ಫೋನ್ ಮಾಡಿದ್ದ ಕಾರ್ತಿಕ್ ಹಾಗೂ ನಿಖಿಲ್ ಒಂದು ಕೊಲೆಯಾಗಿದೆ, ಪೊಲೀಸರಿಗೆ ಶರಣಾಗಬೇಕು ಎಂದಿದ್ರು. ಶರಣಾದ್ರೆ ಬಾಸ್ ಹಣಕೊಡ್ತಾರೆ, ನಮ್ಮ ಎಲ್ಲಾ ಖರ್ಚು ನೋಡ್ಕೋತಾರೆ ಜಾಮೀನು ಕೊಡಿಸುತ್ತಾರೆ ಎಂದು ಹೇಳಿ ಮನವೊಲಿಸಿದ್ರಂತೆ. ಇದಕ್ಕೆ ಒಪ್ಪಿಕೊಂಡ ಕೇಶವಮೂರ್ತಿ ಪಟ್ಟಣಗೆರೆ ಶೆಡ್ ಗೆ ಹೋಗಿ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸರ ಮುಂದೆ ಶರಣಾಗಿ ಈಗ ಪರದಾಡುತ್ತಿದ್ದಾನಂತೆ..