ಕಲಬುರ್ಗಿ;- ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಾ ಬಳಿ ಜರುಗಿದೆ.
ಟ್ಯಾಂಕರ್& ಆಟೋ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಆರು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ನಾಲವಾರ ಗ್ರಾಮದವರಾಗಿದ್ದು, ಸ್ಥಳಕ್ಕೆ ವಾಡಿ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ.
ಮೃತರನ್ನು ನಸೀಮಾ ಬೇಗಂ, ಬಿಬಿ ಫಾತೀಮಾ, ಹಾಬುಬಕರ್, ಬಿಬಿ ಮರಿಯಮ್ಮ, ಮಹ್ಮದ್ ಪಾಶಾ, ಆಟೋ ಚಾಲಕ ಬಾಬಾ ಎಂದು ಹೇಳಲಾಗಿದೆ.